ಲಂಡನ್: ಬಾಂಗ್ಲಾ ವಿರುದ್ಧ ಕಣಕ್ಕೆ ಇಳಿದಿರುವ ಭಾರತ ಟಾಸ್ ಗೆದ್ದಿದ್ದು ಬ್ಯಾಟಿಂಗ್ ಆಯ್ದುಕೊಂಡಿದೆ. ಎಡ್ಜ್ ಬಾಸ್ಟನ್ ಅಂಗಳದಲ್ಲಿ ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 3 ಗಂಟೆಗೆ ಮ್ಯಾಚ್ ಶುರುವಾಗಲಿದೆ.
ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿರುವ ಕೊಹ್ಲಿ ಬಿಗ್ ಸ್ಕೋರ್ ಮಾಡುವ ಲೆಕ್ಕಾಚಾರ ಮಾಡಿದ್ದಾರೆ. ಕ್ಯಾಪ್ಟನ್ ಕೊಹ್ಲಿ ನಿರ್ಧಾರಕ್ಕೆ ತಕ್ಕ ಆಟವಾಡುವ ಪ್ಲಾನ್ ನಲ್ಲಿ ಬ್ಲೂ ಬಾಯ್ಸ್ ಇದ್ದಾರೆ. ಕಳೆದ ಪಂದ್ಯದಲ್ಲಿ ಫೇಲ್ ಆದ ಆರಂಭಿಕ ಆಟಗಾರ ಕೆ.ಎಲ್ ರಾಹುಲ ಇಂದಿನ ಪಂದ್ಯದಲ್ಲಿ ಏನು ಮಾಡ್ತಾರೆ ಅನ್ನೋ ಕುತೂಹಲವಿದೆ.
ವರ್ಲ್ಡ್ ಕಪ್ ನಲ್ಲಿ 3 ಶತಕ ಸಿಡಿಸಿ ದಾಖಲೆ ಮಾಡಿರುವ ರೋಹಿತ ಶರ್ಮಾ, ಈ ಪಂದ್ಯದಲ್ಲಿಯೂ ಶತಕ ಬಾರಿಸಿದ್ರೆ ಶ್ರೀಲಂಕಾ ಮಾಜಿ ಕ್ಯಾಪ್ಟನ್ ಕುಮಾರ ಸಂಗಾಕರ್ ದಾಖಲೆ ಮುರಿಯಲಿದ್ದಾರೆ. ಇಂದಿನ ಪಂದ್ಯ ಭಾರತ ಗೆದ್ದರೆ ಸೆಮಿಫೈನಲ್ ಫಿಕ್ಸ್.