ಬಾಂಗ್ಲಾ ಬೌಲರ್ ಗಳ ಬೆವರಿಳಿಸಿದ ‘ರೋರಾ’

378

ಲಂಡನ್: ಎಡ್ಜ್ ಬಾಸ್ಟನ್ ಅಂಗಳದಲ್ಲಿ ಭಾರತದ ಆರಂಭಿಕ ಆಟಗಾರ ರೋಹಿತ ಶರ್ಮಾ ಭರ್ಜರಿ ಶತಕ ಸಿಡಿಸಿದ್ದಾರೆ. ಈ ಮೂಲಕ ವರ್ಲ್ಡ್ ಕಪ್ ವೊಂದರಲ್ಲಿ 4 ಶತಕಗಳನ್ನ ಸಿಡಿಸಿದ ಆಟಗಾರನಾಗಿದ್ದಾನೆ. ಶ್ರೀಲಂಕಾದ ಕುಮಾರ ಸಂಗಾಕರ್ ಸಹ ನಾಲ್ಕು ಶತಕಗಳನ್ನ ಸಿಡಿಸಿದ್ದಾರೆ.

ರೋಹಿತ ಹಾಗೂ ರಾಹುಲ ಜೋಡಿ ಭರ್ಜರಿಯಾಗಿ ಆಟವಾಡ್ತಿದೆ. ಬಾಂಗ್ಲಾ ಬೌಲರ್ ಗಳ ವಿರುದ್ಧ ಬೌಂಡರ್, ಸಿಕ್ಸರ್ ಗಳನ್ನ ಮೇಲಿಂದ ಮೇಲೆ ಸಿಡಿಸ್ತಿದ್ದು, 350 ಪ್ಲಸ್ ಆಟವಾಡುವ ಮುನ್ಸೂಚನೆ ನೀಡಿದ್ದಾರೆ. ಶತಕದ ಜೊತೆಗೆ ಈ ವರ್ಲ್ಡ್ ಕಪ್ ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಮೊದಲ ಆಟಗಾರ ರೋಹಿತ ಶರ್ಮಾ ಆಗಿದ್ದಾರೆ.

ಕಳೆದ ಪಂದ್ಯದಲ್ಲಿ ಫೇಲ್ ಆಗಿದ್ದ ಕನ್ನಡಿಗ ಕೆ.ಎಲ್ ರಾಹುಲ 70 ಪ್ಲಸ್ ಆಡಿದ್ದು, ಶತಕದತ್ತ ಸಾಗಿದ್ದಾನೆ. ಆರಂಭಿಕ ಜೋಡಿಯುವ 29 ಓವರ್ ಗಳಲ್ಲಿ 176 ರನ್ ಗಳಿಸಿದೆ.


TAG


Leave a Reply

Your email address will not be published. Required fields are marked *

error: Content is protected !!