ಹುಲಿಗಳು ವರ್ಸಸ್ ಹುಲಿಗಳು

458

ಲಂಡನ್: ಭಾನುವಾರದ ಪಂದ್ಯ ಸೋತು ಸೆಮಿಫೈನಲ್ ಹಾದಿ ಕಷ್ಟಮಾಡಿಕೊಂಡಿರುವ ಟೀಂ ಇಂಡಿಯಾ ಬಾಂಗ್ಲಾ ವಿರುದ್ಧದ ನಾಳೆಯ ಪಂದ್ಯ ಗೆಲ್ಲಬೇಕಿದೆ. ಹೀಗಾಗಿ ಬಾಂಗ್ಲಾ ವಿರುದ್ಧದ ಪಂದ್ಯ ಭಾರತಕ್ಕೆ ಮಹತ್ವದಾಗಿದೆ. ಇನ್ನೊಂದು ಪಂದ್ಯ ಬಾಕಿಯಿದ್ರೂ ಹೆಚ್ಚಿನ ರಿಸ್ಕ್ ತೆಗೆದುಕೊಳ್ಳುವುದು ಡೇಂಜರ್.

ಎಡ್ಜ್ ಬಾಸ್ಟನ್ ಅಂಗಳದಲ್ಲಿ ಕೊಹ್ಲಿ ಹಾಗೂ ಮುರ್ತಾಜ್ ಪಡೆಯ ನಡುವೆ ನಾಳೆ ಪಂದ್ಯ ನಡೆಯಲಿದೆ. ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತ ಹಾಗೂ 6ನೇ ಸ್ಥಾನದಲ್ಲಿರುವ ಬಾಂಗ್ಲಾ ನಡುವೆ ಬಿಗ್ ಫೈಟ್ ಆಗುವ ಸಾಧ್ಯತೆಯಿದೆ. ಯಾಕಂದ್ರೆ, ಭಾರತಕ್ಕೆ ಬಾಂಗ್ಲಾ ಸುಲಭ ತುತ್ತಾಗಲು ಬಿಡೋದಿಲ್ಲ ಅಂತಾ ಕೋಚ್ ಸುನೀಲ ಜೋಶಿ ಹೇಳಿರುವ ಮಾತನ್ನ ನಿರ್ಲಕ್ಷ್ಯ ಮಾಡುವ ಹಾಗಿಲ್ಲ.

ಇದುವರೆಗೂ ಆಡಿರುವ ಪಂದ್ಯಗಳಲ್ಲಿ ಬಾಂಗ್ಲಾ ಉತ್ತಮ ಪ್ರದರ್ಶನ ನೀಡಿದೆ. ಸೋತಿರುವ ಪಂದ್ಯಗಳಲ್ಲಿಯೂ ದಿಟ್ಟ ಹೋರಾಟ ನಡೆಸಿದೆ. ಭಾರತ ಹಾಗೂ ಪಾಕ್ ಜೊತೆ ಏನಾದ್ರೂ ಬಾಂಗ್ಲಾ ಗೆದ್ದರೆ ಸೆಮಿಪೈನಲ್ ಗೆ ಬರುವ ಚಾನ್ಸ್ ಇದೆ. ಹೀಗಾಗಿ ಕಳೆದ ಪಂದ್ಯದಲ್ಲಿ ಸೋತಿರುವ ಭಾರತ ಎಚ್ಚರಿಕೆಯಿಂದ ಆಡಬೇಕಿದೆ.

ಹಿಂದಿನ ಮ್ಯಾಚ್ ನಲ್ಲಿ ಕರ್ನಾಟಕದ ಆಟಗಾರ ಕೆ.ಎಲ್ ರಾಹುಲ ಫೇಲ್ ಆದ. ಇದರ ಹಿಂದಿನ ಪಂದ್ಯದಲ್ಲಿ ಬ್ಯಾಡ್ ಲಕ್ ನಿಂದ ಔಟ್ ಆಗಿದ್ದ ರೋಹಿತ ಶರ್ಮಾ ಆಂಗ್ಲರ ವಿರುದ್ಧ ಭರ್ಜರಿ ಶತಕ ಸಿಡಿಸಿದ. ಕ್ಯಾಪ್ಟನ್ ಕೊಹ್ಲಿ ಫಾರ್ಮ್ ಮುಂದುವರೆದಿದೆ. ಮಧ್ಯಮ ಕ್ರಮಾಂಕದ ಸಮಸ್ಯೆ ನಿಂತಿಲ್ಲ. ಭಾನುವಾರದ ಪಂದ್ಯದಲ್ಲಿ ಜಾಧವ್ ಹಾಗೂ ಧೋನಿ ಆಟ ಇಂಡಿಯನ್ ಕ್ರಿಕೆಟ್ ಪ್ರೇಮಿಗಳಿಗೆ ಬೇಸರ ತರಿಸಿದೆ. ಇದ್ರಿಂದಾಗಿ ನಾಳಿನ ಮ್ಯಾಚ್ ಕುತೂಹಲ ಮೂಡಿಸಿದೆ.

ಬೌಲಿಂಗ್ ವಿಭಾಗದಲ್ಲಿ ಶೆಮಿ ಸಖತ್ ಫಾರ್ಮ್ ನಲ್ಲಿದ್ದು 3 ಪಂದ್ಯಗಳಲ್ಲಿ 13 ವಿಕೆಟ್ ಪಡೆಯುವ ಮೂಲಕ ಮಾರಕ ಬೌಲರ್ ಆಗಿದ್ದಾರೆ. ಇನ್ನು ಬೂಮ್ರಾ, ಚಾಹಲ್ ಬೌಲಿಂಗ್ ಸಹ ಚೆನ್ನಾಗಿದೆ. ಕುಲದೀಪ ದುಬಾರಿಯಾಗ್ತಿದ್ದು ವಿಕೆಟ್ ಪಡೆಯುವಲ್ಲಿ ಯಶಸ್ಸು ಕಾಣ್ತಿಲ್ಲ.

ಇನ್ನು ಬಾಂಗ್ಲಾ ಬ್ಯಾಟಿಂಗ್ ವಿಭಾಗದಲ್ಲಿ ಹುಸೈನ್, ಇಕ್ಬಾಲ್, ಸೆಫಿವುದ್ದೀನ್ ಹಾಗೂ ಮಾಜಿ ಕ್ಯಾಪ್ಟನ್ ಶಕೀಬ್ ಅಲ್ ಹಸನ್ ಭರ್ಜರಿಯಾಗಿ ಆಡ್ತಿದ್ದಾರೆ. ಶಕೀಬ್ ಈ ಪಂದ್ಯದಲ್ಲಿ ಅಬ್ಬರಿಸಿದ್ರೆ ಭಾರತಕ್ಕೆ ಗೆಲುವು ಕಷ್ಟವಾಗೋದ್ರಲ್ಲಿ ನೋ ಡೌಟ್. ಬೌಲಿಂಗ್ ನಲ್ಲಿ ಅನುಭವಿ ಮುಷಫಿರ್ ರಹೆಮಾನ್, ಕ್ಯಾಪ್ಟನ್ ಮುರ್ತಾಜ್, ಆಲ್ ರೌಂಡರ್ ಶಕೀಬ್ ಹಾಗೂ ರುಬಿಲ್ ಹುಸೈನ್ ಭಾರತದ ಬ್ಯಾಟ್ಸ್ ಮನ್ ಗಳಿಗೆ ಕಾಡುವ ಸಾಧ್ಯತೆಯಿದೆ. ಹೀಗಾಗಿ ನಾಳಿನ ಪಂದ್ಯವನ್ನ ಭಾರತ ಗೆಲ್ಲುವ ಮೂಲಕ ಸೆಮಿಫೈನಲ್ ಗೆ ತಲುಪುವುದು ಮುಖ್ಯ. ಇನ್ನೊಂದು ಪಂದ್ಯವಿದೆ ಅಂತಾ ಎಚ್ಚರ ತಪ್ಪಿದ್ರೆ ಮನೆಗೆ ಬರಬೇಕಾಗುತ್ತೆ.

ಭಾರತೀಯ ಕಾಲಮಾನದ ಪ್ರಕಾರ ನಾಳೆ ಮಧ್ಯಾಹ್ನ 3 ಗಂಟೆಗೆ ಮ್ಯಾಚ್ ನಡೆಯಲಿದೆ.




Leave a Reply

Your email address will not be published. Required fields are marked *

error: Content is protected !!