ಟೆಸ್ಟ್ ಸರಣಿ ಕೈವಶ.. ಧೋನಿ ದಾಖಲೆ ಮುರಿದ ಕೊಹ್ಲಿ..

317

ಜಮೈಕಾ: ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯವನ್ನ ಸಹ ಗೆಲ್ಲುವ ಮೂಲಕ ಭಾರತ 2 ಪಂದ್ಯಗಳ ಸರಣಿ ಕೈವಶ ಮಾಡಿಕೊಂಡಿದೆ. 478 ರನ್ ಗಳ ಬೃಹತ್ ಟಾರ್ಗೆಟ್ ಮುಟ್ಟುವಲ್ಲಿ ವೆಸ್ಟ್ ಇಂಡೀಸ್ ಪಡೆ ಫೇಲ್ ಆಗಿದೆ. ಹೀಗಾಗಿ ಒಂದು ದಿನ ಬಾಕಿ ಇರುವಾಗ್ಲೇ 210 ರನ್ ಗಳಿಗೆ ಸರ್ವಪತನ ಕಂಡಿದೆ.

Image result for hanuma vihari
ಹನುಮ ವಿಹಾರಿ

ಬ್ರೋಕ್ಸ್ ಅರ್ಧ ಶತಕ ಹೊರತಾಗಿ ಬ್ಲಾಕ್ ವುಡ್ 38 ಹಾಗೂ ಕ್ಯಾಪ್ಟನ್ ಹೋಲ್ಡರ್ 39 ರನ್ ಗಳಿಸಿದ್ದಾರೆ. ಉಳಿದಂತೆ ಎಲ್ಲರೂ ಹೀಗೆ ಬಂದ ಹಾಗೇ ಹೋಗಿದ್ದಾರೆ. ಫಾಸ್ಟ್ ಬೌಲರ್ ಮೊಹ್ಮದ ಶಮಿ ಹಾಗೂ ಸ್ಪೀನರ್ ಜಡೇಜಾ ತಲಾ 3 ವಿಕೆಟ್ ಪಡೆದ್ರೆ ಇಶಾಂತ ಶರ್ಮಾ 2 ವಿಕೆಟ್ ಪಡೆದು ಮಿಂಚಿದ್ರು. ಬೂಮ್ರಾ ಒಂದು ವಿಕೆಟ್ ಪಡೆದ.

ತಲಾ 3 ವಿಕೆಟ್ ಪಡೆದ ಜಡೇಜಾ-ಶಮಿ

ಪ್ಲೇಯರ್ ಆಫ್ ದಿ ಮ್ಯಾಚ್

ಇನ್ನು ಮೊದಲ ಇನ್ನಿಂಗ್ಸ್ ನಲ್ಲಿ ಭರ್ಜರಿ ಶತಕ(111) ಹಾಗೂ ಎರಡನೇ ಇನ್ನಿಂಗ್ಸ್ ನಲ್ಲಿ ಅರ್ಧಶತಕ(53) ಗಳಿಸಿದ್ದ ಹನುಮ ವಿಹಾರಿ ಪ್ಲೇಯರ್ ಆಫ್ ದಿ ಮ್ಯಾಚ್ ಆದ.

Image result for india vs west indies 2nd test
ಗೆಲುವಿನ ಖುಷಿಯಲ್ಲಿ ನಾಯಕ ವಿರಾಟ ಕೊಹ್ಲಿ

ಧೋನಿ ದಾಖಲೆ ಮುರಿದ ಕೊಹ್ಲಿ

2 ಟೆಸ್ಟ್ ಪಂದ್ಯಗಳ ಸರಣಿಯನ್ನ ಕ್ಲೀನ್ ಸ್ವೀಪ್ ಮಾಡಿಕೊಂಡ ಕ್ಯಾಪ್ಟನ್ ವಿರಾಟ ಕೊಹ್ಲಿ, ಮಾಜಿ ನಾಯಕ ಧೋನಿ ದಾಖಲೆಯನ್ನ ಬ್ರೇಕ್ ಮಾಡಿದ. 28 ಟೆಸ್ಟ್ ಪಂದ್ಯಗಳನ್ನ ಗೆಲ್ಲಿಸುವ ಮೂಲಕ 27 ಪಂದ್ಯಗಳನ್ನ ಗೆಲ್ಲಿಸಿಕೊಟ್ಟಿದ್ದ ಧೋನಿ ದಾಖಲೆಯನ್ನ ಕೊಹ್ಲಿ ಸರಿಗಟ್ಟಿದ. 48 ಟೆಸ್ಟ್ ಪಂದ್ಯಗಳಲ್ಲಿ ಮುನ್ನಡೆಸಿರುವ ಕೊಹ್ಲಿ 28ರಲ್ಲಿ ಗೆಲುವು ದಾಖಲಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!