ಇಫಿ ಚಿತ್ರೋತ್ಸವ: ಕನ್ನಡದ 2 ಚಿತ್ರಗಳ ಪ್ರದರ್ಶನ

356

ಪಣಜಿ: ಗೋವಾದ ಪಣಜಿಯಲ್ಲಿ ಇಫಿ ಚಿತ್ರೋತ್ಸವಕ್ಕೆ ಇಡೀ ನಗರ ಶೃಂಗಾರಗೊಂಡಿದೆ. ಇನ್ನು ಕೆಲ ಗಂಟೆಗಳಲ್ಲಿಯೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವ ಶುರುವಾಗಲಿದೆ. ಇದರಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಹಾಗೂ ಸೌಥ್ ದುನಿಯಾದ ಸೂಪರ್ ಸ್ಟಾರ್ ರಜನಿಕಾಂತ ಭಾಗವಹಿಸಲಿದ್ದಾರೆ.

ಈ ಬಗ್ಗೆ ಮಾತ್ನಾಡಿರುವ ಗೋವಾ ಸಿಎಂ ಪ್ರಮೋದ ಸಾವಂತ್, ಚಿತ್ರೋತ್ಸವದ ಎಲ್ಲ ಸಿದ್ಧತೆ ಮುಗಿದಿದೆ. 50ನೇ ವರ್ಷದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಭ್ರಮವಿರುತ್ತೆ. ಮೊದಲ ಬಾರಿಗೆ ಗೋವಾದ 200 ಕಲಾ ವಿದ್ಯಾರ್ಥಿಗಳು ಭಾಗವಹಿಸ್ತಿದ್ದಾರೆ ಅಂತಾ ಹೇಳಿದ್ದಾರೆ.

ಇಂದು ಮಧ್ಯಾಹ್ನ 3ಗಂಟೆಗೆ ಡಾ.ಶ್ಯಾಮಪ್ರಸಾದ ಮುಖರ್ಜಿ ಚಿತ್ರೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ರಜನಿಕಾಂತಗೆ ಸುವರ್ಣ ಮಹೋತ್ಸವ ಗೌರವ ನೀಡಲಾಗ್ತಿದೆ. ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಪಡೆದ ಹಿನ್ನೆಲೆಯಲ್ಲಿ ಅಮಿತಾಬ್ ಬಚ್ಚನ್ ಅವರನ್ನ ಆಹ್ವಾನಿಸಲಾಗಿದ್ದು, ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ನಿರ್ದೇಶಕ ಕರಣ ಜೊಹರ್ ನಿರೂಪಣೆ ಮಾಡಲಿದ್ದಾರೆ.

ಈ ವರ್ಷ ಕಣ್ಮರೆಯಾದ ದಿಗ್ಗಜರು

ಒಟ್ಟು 9 ದಿನಗಳ ಚಿತ್ರೋತ್ಸವದಲ್ಲಿ 78 ದೇಶಗಳ 200ಕ್ಕೂ ಹೆಚ್ಚು ಚಿತ್ರಗಳು ಪ್ರದರ್ಶನಗೊಳ್ಳಲಿವೆ. 9 ಸಾವಿರದ 300 ಜನ ಹೆಸರು ನೋಂದಾಯಿಸಿಕೊಂಡಿದ್ದಾರೆ. ಕಾಗದ ರಹಿತ ಟಿಕೆಟ್ ಪದ್ಧತಿ ಜಾರಿಗೆ ತರಲಾಗಿದೆ. 50ನೇ ವರ್ಷದ ಸಂಭ್ರಮದಲ್ಲಿ1969ರಲ್ಲಿ ರಿಲೀಸ್ ಆದ ಭಾರತೀಯ ಹನ್ನೊಂದು ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಅದರಲ್ಲಿ ಕನ್ನಡದ ಉಯ್ಯಾಲೆ ಚಿತ್ರ ಸಹ ಒಂದು. ಇದನ್ನ ಎನ್.ಲಕ್ಷ್ಮಿನಾರಾಯಣ ನಿರ್ದೇಶನ ಮಾಡಿದ್ದಾರೆ. ಇದರ ಜೊತೆಗೆ ಶ್ರದ್ಧಾಂಜಲಿ ಸಲ್ಲಿಸುವ ವಿಭಾಗದಲ್ಲಿ ನಾಟಕಕಾರ, ಜ್ಞಾನಪೀಠ ಪುರಸ್ಕೃತ ಗಿರೀಶ ಕಾರ್ನಾಡರ ಕಾನೂರು ಸುಬ್ಬಮ್ಮ ಹೆಗ್ಗಡತಿ ಚಿತ್ರ ಪ್ರದರ್ಶನಗೊಳ್ಳುತ್ತಿದೆ.




Leave a Reply

Your email address will not be published. Required fields are marked *

error: Content is protected !!