ಐಪಿಎಲ್ ಬೆಟ್ಟಿಂಗ್: ಮಾಜಿ ಕ್ರಿಕೆಟಿಗ ಸೇರಿ ಮೂವರು ಅರೆಸ್ಟ್

261

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಮುಂಬೈ: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ತೊಡಗಿಕೊಂಡಿದ್ದ ಮಾಜಿ ರಣಜಿ ಕ್ರಿಕೆಟ್ ಆಟಗಾರ ಸೇರಿದಂತೆ ಮೂವರನ್ನ ಬಂಧಿಸಲಾಗಿದೆ. ಮಾಜಿ ರಣಜಿ ಆಟಗಾರ ರಾಬಿನ್ ಮೊರಿಸ್ ಸೇರಿ ಮೂವರ ಬಂಧನವಾಗಿದೆ.

ರಾಬಿನ್ ಮೊರಿಸ್ ತನ್ನ ಫ್ಲಾಟ್ ನಲ್ಲಿಯೇ ಕ್ರಿಕೆಟ್ ಬೆಟ್ಟಿಂಗ್ ನಡೆಸ್ತಿದ್ದ ಬಗ್ಗೆ ಖಚಿತ ಮಾಹಿತಿ ಬಂದಿದೆ. ಇದರ ಆಧಾರದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ರಾಬಿನ್ ಮೊರಿಸ್, ರೋಹಿತ ಬಾಬು, ಧಿರೇಂದ್ರ ಕುಲಕರ್ಣಿ ಎಂಬುವರನ್ನ ಬಂಧಿಸಲಾಗಿದೆ.

ರಾಬಿನ್ ಮಾರಿಸ್

ಬಂಧಿತರಿಂದ 2 ಟ್ಯಾಬ್, ಹಲವು ಮೊಬೈಲ್ ಗಳು ಹಾಗೂ 9 ಸಾವಿರ ರೂಪಾಯಿ ನಗದು ವಶ ಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.




Leave a Reply

Your email address will not be published. Required fields are marked *

error: Content is protected !!