ಸಿಎಸ್ಕೆ ಟೀಂನ ಈ ಆಟಗಾರರಿಗೆ ಇದು ಲಾಸ್ಟ್ ಟೂರ್ನಿನಾ..?

266

ಪ್ರಜಾಸ್ತ್ರ ಸುದ್ದಿ

ಶುಕ್ರವಾರದಿಂದ 2021ನೇ ಐಪಿಎಲ್ ಟೂರ್ನಿ ಶುರುವಾಗ್ತಿದೆ. ಮೊದಲ ಪಂದ್ಯದಲ್ಲಿ ಆರ್ ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ನಡುವೆ ಫೈಟ್ ನಡೆಯಲಿದೆ. ಏಪ್ರಿಲ್ 10ಕ್ಕೆ ಸಿಎಸ್ಕೆ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆಯಲಿದೆ. ಇದರ ನಡುವೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕೆಲ ಆಟಗಾರರಿಗೆ ಇದು ಕೊನೆಯ ಟೂರ್ನಿ ಎನ್ನಲಾಗ್ತಿದೆ.

2008ರಿಂದ ಸಿಎಸ್ಕೆ ಟೀಂ ಲೀಡ್ ಮಾಡ್ತಿರುವ ಎಂ.ಎಸ್ ಧೋನಿ(39) ಕಳೆದ ವರ್ಷದ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. ಅದೆ ರೀತಿ ಈ ಟೂರ್ನಿ ಬಳಿಕ ಐಪಿಎಲ್ ಗೂ ಗುಡ್ ಬೈಕ್ ಹೇಳ್ತಾರೆ ಎನ್ನಲಾಗ್ತಿದೆ. ಧೋನಿ ನಿವೃತ್ತಿ ಘೋಷಿಸಿದ ಕೆಲ ನಿಮಿಷಗಳಲ್ಲಿಯೇ ಇಂಟರ್ ನ್ಯಾಷನ್ ಕ್ರಿಕೆಟ್ ಗೆ ಸುರೇಶ ರೈನಾ(34) ವಿದಾಯ ಹೇಳಿದರು. ಕೆಲ ಕಾರಣಗಳಿಂದ ಕಳೆದ ಐಪಿಎಲ್ ನಲ್ಲಿ ಆಡ್ಲಿಲ್ಲ. ಅಲ್ದೇ, ಫಾರ್ಮ್ ವಿಚಾರದಲ್ಲಿಯೂ ಕಷ್ಟಪಡ್ತಿರುವ ಚುಟುಕು ದಾಂಡಿಗನಿಗೂ ಇದು ಲಾಸ್ಟ್ ಟೂರ್ನಿ ಆಗಬಹುದು.

ಹಾಗೇ ಬೌಲರ್ ಇಮ್ರಾನ್ ತಾಹಿರ್ ಸಹ ಮುಂದಿನ ಸಾರಿ ಆಡೋದು ಡೌಟ್ ಅಂತೆ. 42 ವರ್ಷದ ಹಿರಿಯ ಆಟಗಾರ ಕಳೆದ ವರ್ಷ ಆಡಿರುವುದು ಕೇವಲ 3 ಪಂದ್ಯ. ಇನ್ನು ಆಲ್ ರೌಂಡರ್ ಡ್ವೇನ್ ಬ್ರಾವೋ(37)ಗೂ ಇದು ಕೊನೆಯ ಐಪಿಎಲ್ ಟೂರ್ನಿ ಅನ್ನೋ ಮಾತಿದೆ. ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಈ ಪ್ರಮುಖ ನಾಲ್ಕು ಆಟಗಾರರು 2021ರ ಟೂರ್ನಿ ನಂತರ ನಿವೃತ್ತಿ ಘೋಷಿಸುವ ಸಾಧ್ಯತೆ ಹೆಚ್ಚಿದ್ದು ಮುಂದಿನ ದಿನಗಳಲ್ಲಿ ಇದಕ್ಕೆ ಉತ್ತರ ಸಿಗಲಿದೆ.




Leave a Reply

Your email address will not be published. Required fields are marked *

error: Content is protected !!