ಐಪಿಎಸ್ ಅಧಿಕಾರಿ ಡಿ.ರೂಪಾ ಫೋಟೋಶೂಟ್

176

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗಲ್ ಅವರು, ಎಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಜೊತೆಗಿನ ಮುಸುಕಿನ ಗುದ್ದಾಟದ ಮೂಲಕ ವ್ಯಾಪಕ ಪ್ರಚಾರಕ್ಕೆ ಬಂದವರು. ಕರ್ನಾಟಕ ಮೂಲದ ಅಧಿಕಾರಿ ಖಡಕ್ ಖಾಕಿ ಡ್ರೆಸ್ ಬದಲು ರೇಷ್ಮೆ ಸೀರೆಯಲ್ಲಿ ಭರ್ಜರಿ ಫೋಟೋಶೂಟ್ ಮಾಡಿಸಿದ್ದಾರೆ.

ಲಾಠಿ ಹಿಡಿಯುವ ಕೈಯಲ್ಲಿ ಖಡ್ಗ ಹಿಡಿದು ಸಿಂಹಾಸನದ ಮೇಲೆ ಕುಳಿತ ರಾಣಿಯಂತೆ ಸೇರಿ ವಿವಿಧ ರೀತಿಯಲ್ಲಿ ಫೋಟೋಶೂಟ್ ಮಾಡಿಸಿದ್ದು, ಅನೇಕರು ಮೆಚ್ಚಿಕೊಂಡಿದ್ದಾರೆ. ಇನ್ನು ಕೆಲವರು ಶಿಸ್ತು, ಕಟ್ಟು ನಿಟ್ಟಿನ ಪೊಲೀಸ್ ಇಲಾಖೆಯಲ್ಲಿರುವ ಹಿರಿಯ ಅಧಿಕಾರಿಗಳೇ ಹೀಗೆ ನಡೆದುಕೊಂಡರೆ ಹೇಗೆ ಎಂದು ಪ್ರಶ್ನಿಸಿದ್ದಾರೆ. ಒಟ್ಟಿನಲ್ಲಿ ಡಿ.ರೂಪಾ ಅವರ ಹೊಸ ಅವತಾರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.




Leave a Reply

Your email address will not be published. Required fields are marked *

error: Content is protected !!