ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ತರಿಗೆ ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ಡೋಲೋ 650 ಖ್ಯಾತಿಯ ಮೈಕ್ರೋ ಲ್ಯಾಬ್ಸ್ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರು ಸೇರಿದಂತೆ ದೇಶದ ವಿವಿಧ ಕಡೆ ದಾಳಿ ನಡೆಸಲಾಗಿದೆ.
ಕಚೇರಿ, ಫ್ಯಾಕ್ಟರಿ ಸೇರಿ 40ಕ್ಕೂ ಹೆಚ್ಚು ಕಡೆ 200ಕ್ಕೂ ಅಧಿಕ ಐಡಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಕೋವಿಡ್ 19 ಸೋಂಕು ತೀವ್ರವಾಗಿದ್ದ ಸಂದರ್ಭದಲ್ಲಿ ಡೋಲೋ 650 ಮಾತ್ರೆ ಪ್ರಸಿದ್ಧಿ ಪಡೆದು ಹೆಚ್ಚು ಮಾರಾಟವಾಗಿತ್ತು.