ಐಟಿ ದಾಳಿ ಬಳಿಕ ಹೊರಬಿತ್ತು ‘ಇಳಯದಳಪತಿ’ ಸಂಭಾವನೆ

363

ಕಾಲಿವುಡ್ ಸಿನಿ ಜಗತ್ತಿನ ಸ್ಟಾರ್ ನಟ ವಿಜಯ ಮನೆಯ ಮೇಲೆ ಹಾಗೂ ಬಿಗಿಲ್ ಚಿತ್ರದ ನಿರ್ಮಾಪಕ ಅಂಬು ಚೆಜಿಯನ್ ಅವರ ಕಚೇರಿ ಹಾಗೂ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ರು. ದಾಳಿಯ ತನಿಖೆ ಮುಗಿದಿದ್ದು, ಇದೀಗ ನಟ ವಿಜಯ ಸಂಭಾವನೆ ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ.

ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ ಬಿಗಿಲ್ ಚಿತ್ರ ಹಾಗೂ ಮುಂದಿನ ಬಹುನಿರೀಕ್ಷಿತ ಮಾಸ್ಟರ್ ಚಿತ್ರಗಳ ಸಂಭಾವನೆ ಕೇಳಿದ್ರೆ ತಲೆ ಗಿರಗಿರ ತಿರುಗುತ್ತೆ. ಬಿಗಿಲ್ ಚಿತ್ರಕ್ಕಾಗಿ ಇಳಿಯದಳಪತಿ 50 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ರೆ, ಮುಂದಿನ ಮಾಸ್ಟರ್ ಚಿತ್ರಕ್ಕಾಗಿ 80 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರಂತೆ. ಇಷ್ಟೊಂದು ದೊಡ್ಡ ಮೊತ್ತದ ಸಂಭಾವನೆ ಪಡೆದ ಸುದ್ದಿ ಕೇಳಿದ ಕಾಲಿವುಡ್ ಮಂದಿ ಬಾಯಿ ಮೇಲೆ ಬೆರಳಿಟ್ಟುಕೊಂಡಿದ್ದಾರೆ. ಇನ್ನು ಇವುಗಳ ಸಂಭಾವನೆಗೆ ಸಂಬಂಧಿಸಿದಂತೆ ನಟ ಟ್ಯಾಕ್ಸ್ ಕಟ್ಟಿದ್ದು, ಇದ್ರಿಂದ ರಿಲೀಫ್ ಆಗಿದ್ದಾರೆ.

ಆದ್ರೆ, ಈ ಹಿಂದೆ ವಿಜಯ ಹಾಗೂ ಅವರ ಕುಟುಂಬದವರು ಹೂಡಿದ ಬಂಡಾವಳದ ಬಗ್ಗೆ ಸಂಶಯವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಬಿಗಿಲ್ ಚಿತ್ರದ ನಿರ್ಮಾಪಕ ಅಂಬು ಚೆಜಿಯನ್ ಮನೆ ಮೇಲೆ ದಾಳಿ ಮಾಡಿದ ಐಟಿ ಅಧಿಕಾರಿಗಳು 77 ಕೋಟಿ ವಶ ಪಡಿಸಿಕೊಂಡಿದ್ರು. ಅದೇನೇ ಹೇಳಿ ಕಾಲಿವುಡ್ ನಲ್ಲಿ ನಟ ವಿಜಯ ಚಿತ್ರಗಳು ಅಂದ್ರೆ ಅದರ ಹವಾ ಭರ್ಜರಿಯಾಗಿಯೇ ಇರುತ್ತೆ. ಇದೀಗ ಮಾಸ್ಟರ್ ಹವಾ ಎದ್ದಿದೆ. ಇದು ಕನ್ನಡದಲ್ಲಿ ಡಬ್ ಆಗಿ ಬರ್ತಿರೋದು ವಿಶೇಷ.




Leave a Reply

Your email address will not be published. Required fields are marked *

error: Content is protected !!