ತಳಪತಿ ವಿಜಯ ಹುಟ್ಟು ಹಬ್ಬಕ್ಕೆ ‘ಬೀಸ್ಟ್’ ಫಸ್ಟ್ ಲುಕ್

257

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ತಮಿಳು ಚಿತ್ರರಂಗದ ತಳಪತಿ ವಿಜಯಗೆ ಇಂದು 47ನೇ ಹುಟ್ಟು ಹಬ್ಬದ ಸಂಭ್ರಮ. ಕಾಲಿವುಡ್ ಸೇರಿದಂತೆ ಇಡೀ ಸೌಥ್ ಸಿನಿ ದುನಿಯಾದ ಮಂದಿ ಅವರಿಗೆ ಶುಭ ಕೋರುತ್ತಿದ್ದಾರೆ. ನೆಚ್ಚಿನ ನಟನ ಹುಟ್ಟು ಹಬ್ಬಕ್ಕೆ ಅವರ ಅಭಿಮಾನಿಗಳು ಸಹ ಶುಭಾಶಯಗಳ ಸುರಿಮಳೆ ಸುರಿಸ್ತಿದ್ದಾರೆ.

1984ರಲ್ಲಿ ವೆಟ್ರಿ ಅನ್ನೋ ಚಿತ್ರದಲ್ಲಿ ಬಾಲನಟನಾಗಿ ಕಾಣಿಸಿಕೊಳ್ಳುವ ಮೂಲಕ ಅಭಿನಯ ಕ್ಷೇತ್ರಕ್ಕೆ ಬಂದರು. ಮುಂದೆ 1992ರಲ್ಲಿ ನಾಲಯ ಥೆರ್ಪು ಚಿತ್ರದಲ್ಲಿ ಮೇನ್ ರೋಲ್ ನಲ್ಲಿ ಕಾಣಿಸಿಕೊಂಡರು. ಮುಂದೆ ನಾಯಕ ನಟನಾಗಿ ಕಾಣಿಸಿಕೊಂಡರು.

ತಮಿಳು ಮಾತ್ರವಲ್ಲದ ಹೊರ ರಾಜ್ಯ, ದೇಶಗಳಲ್ಲಿಯೂ ಅಪಾರ ಅಭಿಮಾನಿಗಳನ್ನ ನಟ ವಿಜಯ ಸಂಪಾದಿಸಿದ್ದಾರೆ. ಅಭಿಮಾನಿಗಳು ಪ್ರೀತಿಯಿಂದ ತಳಪತಿ(ದಳಪತಿ) ವಿಜಯ ಎಂದೇ ಕರೆಯುತ್ತಾರೆ. ಅವರ ಹುಟ್ಟು ಹಬ್ಬದ ಸಂಭ್ರಮಕ್ಕೆ 65ನೇ ಚಿತ್ರವಾದ ಬೀಸ್ಟ್ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಲಾಗಿದೆ.




Leave a Reply

Your email address will not be published. Required fields are marked *

error: Content is protected !!