ತಮ್ಮ ಹೇಳಿಕೆ ಹಿಂದಕ್ಕೆ ಪಡೆದ ಚೇತನ್ ಅಹಿಂಸಾ

155

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ನಗರದ ಜೈನ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರದರ್ಶನ ಮಾಡಿದ ಕಿರುನಾಟಕದಲ್ಲಿ ಅಂಬೇಡ್ಕರ್ ಅವರಿಗೆ ಅವಮಾನ ಮಾಡಲಾಗಿದೆ ಎಂದು ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಕೇಸ್ ಸಹ ದಾಖಲಾಗಿದೆ. ಈ ಬಗ್ಗೆ ಮಾತನಾಡಿದ್ದ ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ, ಮೋದಿಯನ್ನು ಹಾಸ್ಯ ಮಾಡುವ ಸ್ಟ್ಯಾಂಡ್-ಅಪ್ ಕಾಮಿಕ್‌ ಮತ್ತು ನಾಟಕಗಳನ್ನು ನಾವು ಹೇಗೆ ಸೆನ್ಸಾರ್ ಮಾಡಬಾರದೋ, ರಾಮ, ಮಹಮ್ಮದ್, ಬಸವ, ಅಂಬೇಡ್ಕರ್, ದಲಿತರ ವಿರುದ್ಧ ‘ಹಾಸ್ಯ’ವನ್ನು ಅಪರಾಧ ಎಂದು ಭಾವಿಸಬಾರದು. ಅದು ಪ್ರಜಾಪ್ರಭುತ್ವವಲ್ಲ’ ಎಂದು ಅಭಿಪ್ರಾಯಪಟ್ಟಿದ್ದರು.

ಜೊತೆಗೆ, ಜೈನ್ ವಿಶ್ವವಿದ್ಯಾಲಯದ 6 ವಿದ್ಯಾರ್ಥಿಗಳ ಮೇಲೆ ಹಾಕಲಾಗಿರುವ ಎಫ್‌ಐಆರ್‌ ಮತ್ತು ಅವರಿಗೆ ವಿಧಿಸಲಾಗಿರುವ ಅಮಾನತು ಶಿಕ್ಷೆ ವಾಕ್‌ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದೆ ಎಂದು ಹೇಳಿದ್ದರು. ಅದನ್ನು ಇದೀಗ ವಾಪಸ್ ಪಡೆದಿದ್ದಾರೆ.

ಜೈನ್ ವಿಶ್ವವಿದ್ಯಾಲಯದಲ್ಲಿ ದಲಿತರ ಬಗ್ಗೆ ಮಾಡಿರುವ ಸ್ಕಿಟ್ ಕ್ಲಿಪ್ ಗಳನ್ನು ಪೂರ್ತಿಯಾಗಿ ನೋಡಿದ ನಂತರ ನಾನು ನನ್ನ ಹಿಂದಿನ ಪೋಸ್ಟ್ ಅನ್ನು ಹಿಂತೆಗೆದುಕೊಂಡಿದ್ದೇನೆ. ಜಾತೀಯತೆಯಲ್ಲಿ ಬೇರೂರಿರುವ ಶಿಕ್ಷಣ ವ್ಯವಸ್ಥೆಯಲ್ಲಿ ಅಂತಹ ಚಿತ್ರಣಗಳು ಆಳವಾಗಿ ಮಾನಸಿಕ ಪರಿಣಾಮಗಳನ್ನು ಹೊಂದಿವೆ. ರೋಹಿತ್ ಮೇಮುಲಾ, ಪಾಯಲ್ ತದ್ವಿ ಪ್ರಕರಣಗಳು ಉದಾಹರಣೆಯಾಗಿವೆ. ಈ ಘಟನೆಗೆ ಜೈನ್ ವಿಶ್ವವಿದ್ಯಾಲಯದ ಅಧಿಕಾರಿಗಳನ್ನು ಹೊಣೆ ಮಾಡಬೇಕು. ವಿದ್ಯಾರ್ಥಿಗಳನ್ನು ಅಪರಾಧಿಗಳಾಗಿಸುವುದು ಸರಿಯಾದ ಮಾರ್ಗವೇ? ನನಗೆ ಇನ್ನೂ ಅನುಮಾನವಿದೆ ಎಂದು ಹೇಳುವ ಮೂಲಕ ತಮ್ಮ ಹಿಂದಿನ ಪೋಸ್ಟ್ ಗೆ ವಾಪಸ್ ಪಡೆದಿರುವುದಾಗಿ ತಿಳಿಸಿದ್ದಾರೆ.

ಚೇತನ್ ಅಹಿಂಸಾ ಮೊದಲು ನೀಡಿದ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಯಿತು. ಅನೇಕರು ಇದನ್ನು ಖಂಡಿಸಿ ಸೋಷಿಯಲ್ ಮೀಡಿಯಾದಲ್ಲಿ ಹಲವು ಬರಹಗಳನ್ನು ಬರೆದರು. ಕೆಲವರು ಅವರ ಅಭಿಪ್ರಾಯ ತಮ್ಮದು ಎಂದು ಹೇಳಿ ಬಂಬಲಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!