ಜಾಮಿಯಾ ವಿವಿ ಬಳಿ ಮತ್ತೆ ಗುಂಡಿನ ಸದ್ದು

376

ನವದೆಹಲಿ: ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಆವರಣದಲ್ಲಿ ಭಾನುವಾರ ಮಧ್ಯರಾತ್ರಿ ಮತ್ತೆ ಗುಂಡಿನ ಸದ್ದು ಕೇಳಿಸಿದೆ. ಮಧ್ಯರಾತ್ರಿ ಸುಮಾರು 1 ಗಂಟೆಯ ಟೈಂನಲ್ಲಿ ಗುಂಡು ಹಾರಿಸಲಾಗಿದೆ.

ಸ್ಕೂಟಿಯಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗೇಟ್ ನಂಬರ್ 1ರ ಬಳಿ ಗುಂಡು ಹಾರಿಸಿದ್ದಾರೆ. ಅಲ್ದೇ, ಬೈಕ್ ನಂಬರ್ ಪತ್ತೆ ಮಾಡುತ್ತೇವೆ ಎಂದು ನೋಡಿದ ವಿದ್ಯಾರ್ಥಿಗಳು ಹೇಳಿದ್ದಾರೆ. ಓಖ್ಲಾದಿಂದ ಬಂದ ದುಷ್ಕರ್ಮಿಗಳು ಜುಲೆನಾ ಕಡೆ ಹೋಗಿದ್ದಾರೆ ಎಂದು ವಿವಿ ಸೆಕ್ಯೂರಿಟಿ ಸಿಬ್ಬಂದಿ ಹೇಳಿದ್ದಾರೆ.

ಗುಂಡಿನ ಶಬ್ಧ ಕೇಳಿ ಬಂದ್ಮೇಲೆ ವಿದ್ಯಾರ್ಥಿಗಳು ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದು, ತನಿಖೆ ನಡೆಸಲಾಗ್ತಿದೆ ಎಂದು ಹೆಚ್ಚುವರಿ ಡಿಸಿಪಿ ಕುಮಾರ ಜ್ಞಾನೇಶ ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!