ಕೇಂದ್ರಾಡಳಿತವಾಯ್ತು ಕಣಿವೆ ನಾಡು: ನೂತನ ಗವರ್ನರ್ ಪ್ರಮಾಣ ವಚನ

343

ಶ್ರೀನಗರ: ಇಂದಿನಿಂದ ಜಮ್ಮು ಮತ್ತು ಕಾಶ್ಮೀರ, ಲಡಾಕ್ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳಾದ್ವು. ನಿನ್ನೆ ಮಧ್ಯರಾತ್ರಿಯೇ ವಿಶೇಷ ಸ್ಥಾನಮಾನ ಮುಕ್ತಾಯವಾಗಿದೆ. ಹೀಗಾಗಿ ಜಮ್ಮು ಮತ್ತು ಕಾಶ್ಮೀರ, ಲಡಾಕ್ ಗೆ ಲೆಫ್ಟಿನೆಂಟ್ ಗವರ್ನರ್ ಅಧಿಕಾರ ಸ್ವೀಕಾರ ಮಾಡಿದ್ರು.

ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಆಗಿ ಜಿಸಿ ಮರ್ಮು ಹಾಗೂ ಲಡಾಕ್ ಗವರ್ನರ್ ಆಗಿ ಆರ್.ಕೆ ಮಾಥುರ್ ಅಧಿಕಾರ ವಹಿಸಿಕೊಂಡಿದ್ದಾರೆ. ಇದ್ರಿಂದಾಗಿ ದೇಶದಲ್ಲಿ 28 ರಾಜ್ಯಗಳಲ್ಲಿ 9 ಕೇಂದ್ರಾಡಳಿತ ಪ್ರದೇಶಗಳಾದ್ವು.

ಸ್ವಾತಂತ್ರ್ಯದ ಟೈಂನಲ್ಲಿ ಸರ್ದಾರ್ ವಲ್ಲಭಾಯ್ ಪಟೇಲ್ ಅವರು, 560 ರಾಜ್ಯಗಳನ್ನ ಸೇರಿಸಿ ಯೂನಿಯನ್ ಆಫ್ ಇಂಡಿಯಾ ಮಾಡಿದ್ರು. ಇದೀಗ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು ಮಾಡಿದ 86 ದಿನಗಳ ಬಳಿಕ ರಾಜ್ಯದ ಸ್ಥಾನಮಾನ ಹೋಗಿದೆ.




Leave a Reply

Your email address will not be published. Required fields are marked *

error: Content is protected !!