ಕಣಿವೆ ನಾಡಿನಲ್ಲಿ ಹಂತ ಹಂತವಾಗಿ 144 ಸಡಿಲಿಕೆ

395

ಜಮ್ಮು-ಕಾಶ್ಮೀರ: ಇಷ್ಟು ದಿನಗಳ ನಿಷೇಧಾಜ್ಞೆಯ ಬಳಿಕ ಇದೀಗ ಕಣಿವೆ ನಾಡಿನಲ್ಲಿ ಹಂತ ಹಂತವಾಗಿ ನೆಟ್ ವರ್ಕ್, ಮೊಬೈಲ್ ಸೇವೆ ಶುರುವಾಗ್ತಿದೆ. ಜಮ್ಮು-ಕಾಶ್ಮೀರದ ಐದು ಜಿಲ್ಲೆಗಳಲ್ಲಿ ಇಂದಿನಿಂದ ಮೊಬೈಲ್ ಇಂಟರ್ ನೆಟ್ ಕಾರ್ಯಾರಂಭ ಮಾಡಿದೆ. ಸಧ್ಯ 2ಜಿ ಸ್ಪೀಡ್ ನಲ್ಲಿ ನೆಟ್ ವರ್ಕ್ ಇದೆ.

ಜಮ್ಮು, ರಜೌರಿ, ರಿಯಾಸಿ, ಸಾಂಬಾ, ಕಥುವಾ ಮತ್ತು ಉದ್ಧಂಪುರ್ ಜಿಲ್ಲೆಗಳಲ್ಲಿ 2ಜಿ ಸ್ಪೀಡ್ ನಲ್ಲಿ ಅಂತರ್ಜಾಲ ಸೇವೆ ಆರಂಭವಾಗಿದೆ ಅಂತಾ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಬದ್ಗಾಮ್, ಸೋನಮಾರ್ಗ್, ಮನಿಗಮ್ ಪ್ರದೇಶ ಮತ್ತು ಉತ್ತರ ಕಾಶ್ಮೀರದ ಗುರೆಝ್, ತಂಗ್ ಮಾರ್ಗ್, ಉರಿ ಕೆರನ್ ಕರ್ನಾ, ಟಂಗ್ ದಾರ್ ಪ್ರದೇಶಗಳಲ್ಲಿ ಲ್ಯಾಂಡ್ ಲೈನ್ ಸೇವೆ ಶುರುವಾಗಿದೆ.

ನಿನ್ನೆಯಿಂದ ಹಂತ ಹಂತವಾಗಿ ಒಂದೊಂದು ನಿಷಾಧಾಜ್ಞೆಗಳನ್ನ ಹಿಂದಕ್ಕೆ ಪಡೆಯಲಾಗ್ತಿದ್ದು, ಸರ್ಕಾರಿ ಇಲಾಖೆಗಳು ನಿಧಾನವಾಗಿ ಕೆಲಸ ಶುರು ಮಾಡ್ತಿವೆ. ಈ ಬಗ್ಗೆ ರಾಜ್ಯಪಾಲ ಸತ್ಯಪಾಲ್ ಮಲಿಕ್ ಸಹ ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸುವಂತೆ ತಿಳಿಸಿದ್ರು.




Leave a Reply

Your email address will not be published. Required fields are marked *

error: Content is protected !!