ಇನ್ಮುಂದೆ ಪಂಚಾಯ್ತಿಯಲ್ಲಿ ‘ಜನ ಸುವಿದಾ’ ಕೇಂದ್ರ

272

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಡ್ರೈವಿಂಗ್ ಲೈಸನ್ಸ್ ಸೇರಿದಂತೆ ಅನೇಕ ಸೇವೆಗಳನ್ನ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಆನ್ಲೈನ್ ಮಾಡಿದೆ. ಹೀಗಿದ್ರೂ ಇದು ಗ್ರಾಮಾಂತರ ಪ್ರದೇಶದ ಜನರಿಗೆ ಅಷ್ಟೊಂದು ಅನೂಕಲವಾಗಿಲ್ಲ. ಹೀಗಾಗಿ ಇನ್ಮುಂದೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಜನ ಸುವಿದಾ ಕೇಂದ್ರ ತೆರೆಯಲು ಭಾರತ ಸರ್ಕಾರ ಮುಂದಾಗಿದೆ.

ನೀವು ಚಲನಾ ಪರವಾನಿಗೆ ಸೇರಿದಂತೆ ಪಿಎಂ ಆವಾಸ್ ಯೋಜನೆ, ಪಾಸ್ ಪೋರ್ಟ್, ಆದಾರ್ ಕಾರ್ಡ್ ಗೆ ಸಂಬಂಧಿಸಿದ ಅರ್ಜಿಯನ್ನ ಜನ ಸುವಿದಾ ಕೇಂದ್ರದಲ್ಲಿ ಸಲ್ಲಿಸಬಹುದು. ಈ ಮೂಲಕ ಆರ್ ಟಿಒ ಕೆಲಸಗಳನ್ನ ಆನ್ಲೈನ್ ಮೂಲಕ ಮಾಡಲಾಗ್ತಿದೆ. ಹೀಗಾಗಿ ಆರ್ ಸಿ, ನವೀಕರಣ, ಚಲನಾ ಪರವಾನಿಗೆ, ವಿಳಾಸ ಬದಲಾವಣೆ ಸೇರಿದಂತೆ ಎಲ್ಲವನ್ನೂ ಆನ್ಲೈನ್ ಮೂಲಕ ಭರ್ತಿ ಮಾಡಬಹುದು.

ಜನ ಸುವಿದಾ ಕೇಂದ್ರದಿಂದಾಗಿ ಇನ್ಮುಂದೆ ಒಂದಿಷ್ಟರ ಮಟ್ಟಿಗೆ ದಲ್ಲಾಳಿಗಳ ಕಾಟ ತಪ್ಪಬಹುದು. ಆದ್ರೆ, ಚಲನಾ ಪರೀಕ್ಷೆ ಹಾಗೂ ಫಿಟ್ನೆಸ್ ಗಾಗಿ ಮಾತ್ರ ಆರ್ ಟಿಒ ಕಚೇರಿಗೆ ಬರಬೇಕಾಗುತ್ತೆ.




Leave a Reply

Your email address will not be published. Required fields are marked *

error: Content is protected !!