ಪತ್ರಕರ್ತ ಬಿಡುಗಡೆಗೆ ಸುಪ್ರೀಂ ಆದೇಶ

342

ನವದೆಹಲಿ: ಉತ್ತರ ಪ್ರದೇಶ ಪೊಲೀಸರು ಬಂಧಿಸಿರುವ ಪತ್ರಕರ್ತರನ್ನ ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಪತ್ರಕರ್ತ ಪ್ರಶಾಂತ್ ಕನೋಜಿಯಾ ಬಿಡುಗಡೆಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.

ಪತ್ರಕರ್ತ ಪ್ರಶಾಂತ್ ಕನೋಜಿಯಾ

ಪ್ರಕರಣದ ಹಿನ್ನೆಲೆ:

ಓರ್ವ ಮಹಿಳೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು ನನ್ನನ್ನು ಮದುವೆಯಾಗುವಂತೆ ಪ್ರಸ್ತಾಪಿಸಿದ್ರು ಅಂತಾ, ಮಾಧ್ಯಮಗಳ ಮುಂದೆ ಹೇಳಿದ್ದಳು. ಈ ವಿಡಿಯೋವನ್ನು ನೋಯಿಡಾ ಮೂಲದ ಪತ್ರಕರ್ತ ಪ್ರಶಾಂತ್ ಕನೋಜಿಯಾ ತಮ್ಮ ಫೇಸ್ ಬುಕ್, ಟ್ವೀಟರ್ ನಲ್ಲಿ ಪೋಸ್ಟ್ ಮಾಡಿದ್ರು. ಬಳಿಕ ಇದನ್ನ ಖಾಸಗಿ ಸುದ್ದಿ ವಾಹಿನಿಯೊಂದು ಪ್ರಸಾರ ಮಾಡಿತ್ತು. ಇದಕ್ಕೆ ಸಂಬಂಧಿಸಿದಂತೆ ಆಕ್ಷೇಪಾರ್ಹ ವಿಡಿಯೋ ಹಂಚಿಕೊಂಡಿದ್ದು ಹಾಗೂ ಅದನ್ನ ಪ್ರಸಾರ ಮಾಡಿದ್ರು ಅನ್ನೋ ಕಾರಣಕ್ಕೆ ಕಳೆದ ಶನಿವಾರ ಉತ್ತರ ಪ್ರದೇಶ ಪೊಲೀಸರು ಮೂವರನ್ನ ಬಂಧಿಸಿದ್ರು.

ಕನೋಜಿಯಾ ಪೋಸ್ಟ್ ಮಾಡಿದ್ದ ವಿಡಿಯೋ
ಕನೋಜಿಯಾ ಪತ್ನಿಯ ಖುಷಿ

ಈ ಪ್ರಕರಣ ಸಂಬಂಧ ಪ್ರಶಾಂತ್ ಪತ್ನಿ ಸುಪ್ರೀಂ ಕೋರ್ಟ್ ನಲ್ಲಿ ಜೂನ್ 10ರಂದು ಅರ್ಜಿ ಸಲ್ಲಿಸಿದ್ರು. ಇದರ ವಿಚಾರಣೆ ನಡೆಸಿದ ಕೋರ್ಟ್, ಪ್ರಶಾಂತ್ ಕನೋಜಿಯಾ ಬಂಧಿಸಿದ್ದು ಯಾಕೆ? ಆತ ಕೊಲೆ ಏನಾದ್ರೂ ಮಾಡಿದ್ದಾನೆಯೇ ಅಂತಾ ಪ್ರಶ್ನಿಸಿತ್ತು. ಬಳಿಕ ಅವರನ್ನ ಕೂಡಲೇ ಬಿಡುಗಡೆ ಮಾಡುವಂತೆ ಆದೇಶಿಸಿದೆ.




Leave a Reply

Your email address will not be published. Required fields are marked *

error: Content is protected !!