ಬೆಂಗಳೂರು: ವ್ಹೀಲಿಂಗ್ ಮಾಡಿದ ಜೋಡಿಯೊಂದು ಪೊಲೀಸರ ಅತಿಥಿಯಾಗಿದೆ. ಬೆಂಗಳೂರಿನ ನಂದಿಬೆಟ್ಟಕ್ಕೆ ಹೋಗುವ ರೋಡ್ ನಲ್ಲಿ ಜೋಡಿಯೊಂದು ಅಪಾಯಕಾರಿ ವ್ಹೀಲಿಂಗ್ ಮಾಡಿತ್ತು. ಬಳಿಕ ಅದನ್ನ ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಸಹ ಮಾಡಿದ್ರು.
ಮುಖ್ಯ ರಸ್ತೆಯಲ್ಲಿ ಅಪಾಯಕಾರಿ ವ್ಹೀಲಿಂಗ್ ಮಾಡಿದ್ದ ವಿಡಿಯೋ ವೈರಲ್ ಆಗಿ ಪೊಲೀಸರ ಗಮನಕ್ಕೆ ಬಂದಿತ್ತು. ಇದಕ್ಕೆ ಸಂಬಂಧಿಸಿದಂತೆ ಸುಮೋಟೋ ಪ್ರಕರಣ ದಾಖಲಿಸಿಕೊಂಡ ಹೆಬ್ಬಾಳ ಠಾಣೆ ಪೊಲೀಸರು ಜೋಡಿಯನ್ನ ಬಂಧಿಸಿದೆ.
ವ್ಹೀಲಿಂಗ್ ಮಾಡಿದ ಆರೋಪಿ ಮಹಮದ್ ಎಂದು ಗುರುತಿಸಲಾಗಿದೆ. ಬೈಕ್ ನ್ನ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.