ಕಾಲು ಜಾರಿ ಕಾಲುವೆಗೆ ಬಿದ್ದ ಯುವತಿ!

258

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಜಿಲ್ಲೆಯ ಸಿಂದಗಿ ತಾಲೂಕಿನ ಯರಗಲ್ಲ ಗ್ರಾಮದ ಹತ್ತಿರದ ಕಾಲುವೆಯಲ್ಲಿ ಯುವತಿಯೊಬ್ಬಳು ಆಕಸ್ಮಿಕವಾಗಿ ಬಿದ್ದ ಘಟನೆ ನಡೆದಿದೆ. ಆಯೇರಿ ಗ್ರಾಮದ ಅಂಬಿಕಾ ಅಗಸರ ಅನ್ನೋ‌ ಯುವತಿ ಕಾಲು ಜಾರಿ ಬಿದ್ದಿದ್ದಾಳೆ ಎಂದು ತಿಳಿದು ಬಂದಿದೆ.

ಯುವತಿಯ ಸಂಬಂಧಿಕರು ಹೇಳುವ ಪ್ರಕಾರ, ಜಾತ್ರೆ ಹಿನ್ನೆಲೆಯಲ್ಲಿ ತವರ ಮನೆಗೆ ಬಂದಿದ್ದಳು. ಶೌಚಾಲಯಕ್ಕೆ ಬಂದಿರುವಾಗ ಕಾಲು ಜಾರಿ ಬಿದ್ದಿರಬಹುದು ಎನ್ನಲಾಗುತ್ತಿದೆ. ಈ ಘಟನೆ ಬುಧವಾರ ಮಧ್ಯಾಹ್ನ ಸುಮಾರು 1ಗಂಟೆ ಸಮಯದಲ್ಲಿ ನಡೆದಿದೆ.

ಅಗ್ನಿಶಾಮಕ ಠಾಣೆಗೆ ಸಂಜೆ ಮಾಹಿತಿ ತಿಳಿದ ತಕ್ಷಣ ಕಾರ್ಯಾಚರಣೆ ನಡೆಸಿದ್ದಾರೆ. ಆದರೆ, ಯುವತಿ ಪತ್ತೆಯಾಗಿಲ್ಲ. ಇಂದು ಮತ್ತೆ ಹುಡುಕಾಟ ನಡೆಸಿದ್ದಾರೆ. ಸಿಂದಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.




Leave a Reply

Your email address will not be published. Required fields are marked *

error: Content is protected !!