ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಸ್ಯಾಂಡಲ್ ವುಡ್ ಅಂಗಳದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಕಬ್ಜ ಚಿತ್ರ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ. ಆರ್.ಚಂದ್ರು ನಿರ್ದೇಶನದ ಚಿತ್ರ ಸಾಕಷ್ಟು ಕುತೂಹಲ ಮೂಡಿಸಿದೆ. ಇದರ ನಡುವೆ ಶೂಟಿಂಗ್ ವೇಳೆ ನಟ ಉಪೇಂದ್ರ ತಲೆಗೆ ರಾಡ್ ತಗುಲಿ ಗಾಯವಾಗಿದೆ.
ಯೆಸ್, ಬೆಂಗಳೂರಿನ ಮಿನರ್ವ್ ಮಿಲ್ ಬಳಿ ಫೈಟಿಂಗ್ ಶೂಟಿಂಗ್ ನಡೆದಿದೆ. ಸಹ ನಟ ರಾಡ್ ನಿಂದ ಉಪ್ಪಿಗೆ ಹೊಡೆಯುವ ಸೀನ್ ಇದೆ. ರಾಡ್ ನಿಂದ ತಪ್ಪಿಸಿಕೊಳ್ಳುವಲ್ಲಿ ಜಸ್ಟ್ ಮಿಸ್ ಆದ ಪರಿಣಾಮ ಅವರ ತಲೆಗೆ ಬಡೆದಿದೆ. ಇದ್ರಿಂದಾಗಿ ಒಂದಿಷ್ಟು ಪೆಟ್ಟಾಗಿದೆ. ಸ್ವಲ್ಪ ಹೊತ್ತಿನ ಬಳಿಕ, ಸುಧಾರಿಸಿಕೊಂಡು ಮತ್ತೆ ಶೂಟಿಂಗ್ ನಲ್ಲಿ ತೊಡಗಿಸಿಕೊಂಡಿದ್ದಾರಂತೆ.