ಜ.7ರಂದು ವಚನ ಸಿರಿ, ಸಾಹಿತ್ಯ ಸಿರಿ ಪ್ರಶಸ್ತಿ ಪ್ರದಾನ ಸಮಾರಂಭ

311

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಕಲಬುರ್ಗಿ ಫೌಂಡೇಶನ್ ವತಿಯಿಂದ ಜನವರಿ 7ರಂದು ವಚನ ಸಿರಿ ಹಾಗೂ ಸಾಹಿತ್ಯ ಸಿರಿ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ ಎಂದು, ಹಿರಿಯ ಸಂಶೋಧಕ ಡಾ.ಎಂ.ಎಂ ಪಡಶೆಟ್ಟಿ ಹೇಳಿದರು.

ಪಟ್ಟಣದ ಬಸವ ಮಂಟಪದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಖ್ಯಾತ ಸಂಶೋಧಕರಾಗಿದ್ದ ಡಾ.ಎಂ.ಎಂ ಕಲಬುರ್ಗಿ ಅವರ ಕುಟುಂಬಸ್ಥರು ರಾಜ್ಯ, ಹೊರ ರಾಜ್ಯ, ಹೊರ ರಾಜ್ಯಗಳಲ್ಲಿ ನೆಲೆಸಿದ್ದಾರೆ. ಅವರೆಲ್ಲ ಸೇರಿ ಫೌಂಡೇಶನ್ ಮೂಲಕ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ. ಅದೆ ರೀತಿ ಪ್ರತಿ ವರ್ಷ ವಚನ ಸಿರಿ(ಮಹಿಳಾ ಸಾಧಕರಿಗೆ ಮಾತ್ರ) ಹಾಗೂ ಸಾಹಿತ್ಯ ಸಿರಿ ಪ್ರಶಸ್ತಿ ನೀಡುತ್ತಿದ್ದಾರೆ. ಜನವರಿ 7ರಂದು ಪಟ್ಟಣದ ಅನುಗ್ರಹ ಕಲ್ಯಾಣ ಮಂಟಪದಲ್ಲಿ ಬೆಳಗ್ಗೆ 9.40ಕ್ಕೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಸಾಂಗ್ಲಿ ಜಿಲ್ಲಾ ಪರಿಷತ್ ಮಾಜಿ ಸಭಾಪತಿ ಸುಜಾತಾ ಪಾಟೀಲ ಅವರಿಗೆ ವಚನ ಸಿರಿ ಹಾಗೂ ಪುಣೆಯ ವಚನ ಅಧ್ಯಯನ ವೇದಿಕೆಯ ಅಧ್ಯಕ್ಷ ಡಾ.ಶಶಿಕಾಂತ ಪಟ್ಟಣ ಅವರಿಗೆ ಸಾಹಿತ್ಯ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. 10 ಸಾವಿರ ನಗದು, ಪ್ರಶಸ್ತಿ ಫಲಕ ಹಾಗೂ ಫಲಪುಷ್ಪ ಇರಲಿದೆ. ಕಲಬುರ್ಗಿ ಅವರ ಪತ್ನಿ ಉಮಾದೇವಿ ಎಂ.ಕಲಬುರ್ಗಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕಾರ್ಯಕ್ರಮಕ್ಕೆ ಅಕ್ಕನ ಅರಿವು, ವಚನ ಅಧ್ಯಯನ ಸಂಸ್ಥೆಯ ಸಹಕಾರವಿದೆ ಅಂತಾ ತಿಳಿಸಿದರು.

ಡಾ.ಎಂ.ಎಂ ಕಲಬುರ್ಗಿ ವಿಚಾರ ಸಂಕಿರಣ, ವಚನ ಗಾಯನ, ಮಹಿಳಾ ಕವಿಗೋಷ್ಠಿ ಸೇರಿ ಮೂರು ಗೋಷ್ಠಿಗಳು ಇರಲಿವೆ. ಇದರಲ್ಲಿ ನಾಡಿನ ಖ್ಯಾತ ಸಂಶೋಧಕರು, ಲೇಖಕರು, ಕವಿಗಳು ಭಾಗವಹಿಸಲಿದ್ದಾರೆ. ಶಾಸಕ ರಮೇಶ ಭೂಸನೂರ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದರು. ಈ ವೇಳೆ ನ್ಯೂಜಿಲೆಂಡ್ ನಲ್ಲಿರುವ ಏಷ್ಯಾ ಫೆಸಿಫಿಕ್ ಬಸವ ಸಮಿತಿ ಅಧ್ಯಕ್ಷರಾಗಿರುವ ಡಾ.ಲಿಂಗಣ್ಣ ಕಲಬುರ್ಗಿ, ಹಿರಿಯ ಕಥೆಗಾರ ಡಾ.ಚೆನ್ನಪ್ಪ ಕಟ್ಟಿ, ಶಿವಪ್ಪಣ್ಣ ಗವಸಾನಿ, ಶಿವಾನಂದ ಕಲಬುರ್ಗಿ, ಆರ್.ಆರ್ ಪಾಟೀಲ, ಕಾನಿಪ ಅಧ್ಯಕ್ಷ ಆನಂದ ಶಾಬಾದಿ ಸೇರಿ ಇತರರು ಹಾಜರಿದ್ದರು.




Leave a Reply

Your email address will not be published. Required fields are marked *

error: Content is protected !!