ರಾಜ್ಯ ಚುನಾವಣೆ: 221 ಕ್ಷೇತ್ರಗಳ ಮತದಾರರ ಪಟ್ಟಿ ಪ್ರಕಟ

230

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: 2023ರ ಕರ್ನಾಟಕ ವಿಧಾನಸಭಾ ಚುನಾವಣೆ ಸಂಬಂಧ ರಾಜ್ಯ ಚುನಾವಣಾ ಆಯೋಗ ಸಕಲ ರೀತಿಯಿಂದ ಸಿದ್ಧತೆ ನಡೆಸಿದ್ದು, 221 ಕ್ಷೇತ್ರಗಳ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಕುರಿತು ಟ್ವೀಟ್ ಮೂಲಕ ಮಾಹಿತಿಯನ್ನು ಹಂಚಿಕೊಂಡಿದೆ.

ಮತದಾರರ ಪಟ್ಟಿಯಲ್ಲಿ ಸಾರ್ವಜನಿಕರು ತಮ್ಮ ಹೆಸರುಗಳನ್ನು ಖಚಿತಪಡಿಸಿಕೊಳ್ಳಲು ವೆಬ್ ಸೈಟ್ (nvsp.in) ಅಥವ ಆಪ್ ಮೂಲಕ ನೋಡಬಹುದು ಎಂದು ತಿಳಿಸಲಾಗಿದೆ. ಪ್ರಸ್ತುತ ರಾಜ್ಯದಲ್ಲಿ 5,05,48,553 ಮತದಾರರು ಇದ್ದಾರೆ. ಇದರಲ್ಲಿ 2,54,49,725 ಪುರುಷರು, 2,50,94,326 ಮಹಿಳೆಯರು ಹಾಗೂ 4,502 ಇತರೆ ಮತದಾರರು ಇದ್ದಾರೆ. 7 ಲಕ್ಷ ಹೊಸದಾಗಿ ಸೇರ್ಪಡೆಯಾಗಿದ್ದಾರೆ.

ಲಿಂಗಾನುಪಾತದಲ್ಲಿ ಮತದಾರರ ಏರಿಕೆ ಪ್ರಮಾಣದಲ್ಲಿ 1000 ಪುರುಷರಿಗೆ 988 ಮಹಿಳೆಯರು ಇದ್ದಾರೆ. ಕಳೆದ ಬಾರಿ 983 ಇತ್ತು. ಈ ಬಾರಿ 5 ಪಾಯಿಂಟ್ ಮಹಿಳಾ ಮತದಾರರಲ್ಲಿ ಏರಿಕೆಯಾಗಿದೆ. ಇನ್ನು ಜಿಲ್ಲಾವಾರು ಮತಕ್ಷೇತ್ರಗಳ ಪಟ್ಟಿಯನ್ನು ಜಿಲ್ಲಾಧಿಕಾರಿಗಳು ಬಿಡುಗಡೆ ಮಾಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!