ಕಾವ್ಯ ಸಂಜೆಗೆ ಸಾಕ್ಷಿಯಾದ ಸಿಂದಗಿ ಕೆರೆ

865

ಸಿಂದಗಿ: ಕನ್ನಡ ರಾಜ್ಯೋತ್ಸವ ಪ್ರಯುಕ್ತ ಪ್ರಜಾಸ್ತ್ರ ವತಿಯಿಂದ ‘ಕಾವ್ಯ ಸಂಜೆ’ ಅನ್ನೋ ವಿಭಿನ್ನ ಕಾರ್ಯಕ್ರವನ್ನ ಶನಿವಾರ ಸಂಜೆ ನಡೆಸಲಾಯ್ತು. ಪಟ್ಟಣದ ಕೆರೆಯ ದಂಡೆಯ ಮೇಲೆ ಬೀದಿರು, ಕಟ್ಟಿಗೆ, ತತ್ರಾಣಿ, ಕಂದೀಲು ಸೇರಿದಂತೆ ವಿವಿಧ ವಸ್ತುಗಳನ್ನ ಬಳಸಿಕೊಂಡು ಅಪ್ಪಟ ಗ್ರಾಮೀಣ ಸೊಗಡಿನ ಅಡಿಯಲ್ಲಿ ನಿಸರ್ಗದ ನಡುವೆ ಕಾವ್ಯ ವಾಚನ ನಡೆಯಿತು.

ಅಧ್ಯಕ್ಷತೆ, ಅತಿಥಿ, ಉದ್ಘಾಟನೆ ಅನ್ನೋ ಯಾವುದೇ ಸಿದ್ಧಮಾದರಿಯ ಸೂತ್ರವಿಲ್ಲದೆ, ಸಾಹಿತ್ಯಾಸಕ್ತರ ಮಾತಿನ ಮೂಲಕವೇ ಕಾರ್ಯಕ್ರಮ ಶುರು ಮಾಡಲಾಯ್ತು. ತಾಲೂಕು ಹಾಗೂ ವಿಜಯಪುರ ಜಿಲ್ಲೆಯಿಂದ ಬಂದಿದ್ದ ಕವಿಗಳು ತಮ್ಮ ಕವಿತೆಗಳನ್ನ ವಾಚನ ಮಾಡಿದ್ರು. ನಾಡು ನುಡಿ, ತವಕ ತಲ್ಲಣಗಳು, ವಿರಹ, ಪ್ರೇಮ ಕವಿತೆ ಒಳಗೊಂಡಂತೆ ನೆಲಮೂಲದ ಕಾವ್ಯವನ್ನ ಒಬ್ಬೊಬ್ಬರು ತಮ್ಮ ಕವಿತೆಯಲ್ಲಿ ಕಟ್ಟಿಕೊಟ್ಟಿರು.

ಯಮನೂರಪ್ಪ ಅರಬಿ, ಶಿವಾಜಿ ಮೋರೆ, ರಾಚು ಕೊಪ್ಪ, ದೇವು ಮಾಕೊಂಡ, ಬಸವರಾಜ ಅಗಸರ, ಪ್ರಭು ಬಿರಾದಾರ, ಮಹಾದೇವಿ ಹಿರೇಮಠ ಸೇರಿದಂತೆ ಅನೇಕರು ಕವಿತೆಗಳನ್ನ ವಾಚನ ಮಾಡಿದ್ರು. ಇದೇ ವೇಳೆ ದೇಶದಲ್ಲಿಯೇ ಅಪರೂಪದ ಕಲೆಯಾಗಿರುವ ವುಡ್ ಕೊಲಾಜ್ ಕಲಾವಿದ ಈರಣ್ಣ ಬಡಿಗೇರ ಅವರಿಗೆ ಗೌರವಿಸಲಾಯ್ತು.

ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಆನಂದ ಶಾಹಬಾದಿ, ಪತ್ರಕರ್ತರಾದ ರವಿ ಮಲ್ಲೇದ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಅಂಬರೀಶ ಸುಣಗಾರ, ಶರಣು ಕಿಣಗಿ, ಮಲ್ಲು ಕೆಂಭಾವಿ, ರಮೇಶ ಪೂಜಾರಿ, ಮಹಿಬೂಬ ಮುಲ್ಲಾ, ಗುಂಡು ಕುಲ್ಕರ್ಣಿ, ಉದ್ಯಮಿ ಮಲ್ಲು ಹಿರೋಳ್ಳಿ, ರಾಘು ಜೋಶಿ, ಮಹಿಳಾ ಮುಖಂಡರಾದ ಶೈಲಜಾ ಸ್ಥಾವರಮಠ, ಶಿಕ್ಷಕರಾದ ಸಾಹೇಬಗೌಡ ಬಿರಾದಾರ, ರಾಜಶೇಖರ ಶೆಟ್ಟಿ, ಸಿದ್ದು ಚಟ್ನಳ್ಳಿ, ಲಕ್ಕಣ್ಣ ಬೀರಗೊಂಡ, ಗುರುನಾಥ ಅರಳಗುಂಡಗಿ ಸೇರಿದಂತೆ ಅನೇಕರು ಭಾಗವಹಿಸಿದ್ರು. ಇದೇ ವೇಳೆ ಪ್ರತಿಯೊಬ್ಬರಿಗೂ ಸಸಿಗಳನ್ನ ವಿತರಣೆ ಮಾಡಲಾಯ್ತು.




Leave a Reply

Your email address will not be published. Required fields are marked *

error: Content is protected !!