ಕೊನೆಗೂ ಅಲ್ಲಿ ಎಂಟ್ರಿ ಕೊಟ್ಟ ರಾಕಿ ಬಾಯ್

402

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಎರಡು ವರ್ಷಗಳ ಹಿಂದೆ ರಿಲೀಸ್ ಆದ ಕನ್ನಡದ ಕೆಜಿಎಫ್ ಸಿನಿಮಾ ಹೊಸ ಅಲೆಯನ್ನ ಎಬ್ಬಿಸಿತು. ಪ್ಯಾನ್ ಇಂಡಿಯಾ ಸಿನಿಮಾವಾಗಿ ಹೊರ ಹೊಮ್ಮಿದ ಕೆಜಿಎಫ್, ನಟ ಯಶಗೆ ಹೊಸ ಇಮೇಜ್ ನೀಡಿತು. ಇಂಥಾ ಸಿನಿಮಾ, ಕನ್ನಡ, ಹಿಂದಿ ಸೇರಿದಂತೆ ಸೌಥ್ ಇಂಡಿಯನ್ ಭಾಷೆಯಲ್ಲಿ ಸಹ ರಿಲೀಸ್ ಆಗಿದೆ.

ಥಿಯೇಟರ್ ಜೊತೆಗೆ ಸ್ಮಾಲ್ ಸ್ಕ್ರೀನ್ ಗಳಲ್ಲಿಯೂ ಕೆಜಿಎಫ್ ಕಾಣಿಸಿಕೊಂಡಿತ್ತು. ಆದ್ರೆ, ತೆಲುಗು ಅವತರಣಿಕೆ ಬಿಟ್ಟು. ಈಗ ತೆಲುಗಿನಲ್ಲಿಯೂ ಕೆಜಿಎಫ್ ಮೂವಿ ಸ್ಮಾಲ್ ಸ್ಕ್ರೀನ್ ಗೆ ಎಂಟ್ರಿಯಾಗಿದೆ. ಇಷ್ಟು ದಿನಗಳ ಕಾಲ ಮಾತುಕತೆಯಲ್ಲಿಯೇ ಉಳಿದಿದ್ದ ವಿಚಾರ ಬಗೆಹರಿದಿದ್ದು, ‘ಸ್ಟಾರ್ ಮಾ’ದಲ್ಲಿ ಶೀಘ್ರದಲ್ಲಿ ಪ್ರಸಾರವಾಗಲಿದೆ.

ಸ್ಟಾರ್ ಮಾ ವಾಹಿನಿಯಲ್ಲಿ ಈ ಬಗ್ಗೆ ಪ್ರೋಮೋ ಪ್ರಸಾರವಾಗ್ತಿದ್ದು, ಶೀಘ್ರದಲ್ಲಿ ಚಿತ್ರ ಮೂಡಿ ಬರಲಿದೆ ಎಂದು ಹೇಳಲಾಗಿದೆ. ಇದರೊಂದಿಗೆ ತೆಲುಗು ಟಿವಿ ಚಾನೆಲ್ ಗಳಲ್ಲಿಯೂ ಕೆಜಿಎಫ್ ಚಿತ್ರ ಪ್ರಸಾರವಾಗ್ತಿದೆ.




Leave a Reply

Your email address will not be published. Required fields are marked *

error: Content is protected !!