ಮತ್ತೆ ನಿರ್ದೇಶಕನ ಕ್ಯಾಪ್ ತೊಟ್ಟ ಕಿಚ್ಚ

277

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸ್ಯಾಂಡಲ್ ವುಡ್ ಕಿಚ್ಚ, ನಟ ಸುದೀಪ್ ಅವರ 46ನೇ ಸಿನಿಮಾದ ಟೈಟಲ್ ರಿವೀಲ್ ಆಗಿದೆ. ಅವರ 50ನೇ ಹುಟ್ಟು ಹಬ್ಬದ ಸಂಭ್ರಮದ ಹೊತ್ತಿನಲ್ಲಿ ಸಿನಿಮಾ ಟೈಟಲ್ ಅನಾವರಣಗೊಳಿಸಲಾಗಿದೆ. ಸುದೀಪ್ ಮುಂದಿನ ಚಿತ್ರದ ಹೆಸರು ಮ್ಯಾಕ್ಸ್.

ಮ್ಯಾಕ್ಸ್ ಚಿತ್ರವನ್ನು ವಿಜಯ್ ಕಾರ್ತಿಕ್ ನಿರ್ದೇಶನ ಮಾಡುತ್ತಿದ್ದಾರೆ. ಕಲೈಪುಲಿ ಎಸ್.ಥಾನು ಬಂಡವಾಳ ಹೂಡಿದೆ. ಕೆಆರ್ ಜಿ ಸಂಸ್ಥೆ ಇದನ್ನು ನಿರ್ಮಾಣ ಮಾಡುತ್ತಿದೆ. ಟೈಟಲ್ ಪೋಸ್ಟರ್ ಕಿಚ್ಚನ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಮತ್ತೊಂದು ಮಾಸ್ ಸಿನಿಮಾ ನೋಡಲು ಕಾತರರಾಗಿದ್ದಾರೆ.

ಇನ್ನು ಸುದೀಪ್ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ನೀಡಲಾಗಿದೆ. ಅದೇನು ಅಂದರೆ 10 ವರ್ಷಗಳ ನಂತರ ನಿರ್ದೇಶಕನ ಕ್ಯಾಪ್ ತೊಡುತ್ತಿರುವುದು. ಹೌದು, ಕೆಕೆ ಅನ್ನೋ ಚಿತ್ರವನ್ನು ಸುದೀಪ್ ನಿರ್ದೇಶನ ಮಾಡುತ್ತಿದ್ದಾರೆ. ಕೆಆರ್ ಜಿ ಸ್ಟುಡಿಯೋ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!