ಕಿತ್ತೂರು ಉತ್ಸವ ಆಚರಣೆಗೆ ಬ್ರೇಕ್ ಬೀಳುತ್ತಾ?

149

ಪ್ರಜಾಸ್ತ್ರ ಸುದ್ದಿ

ಬೆಳಗಾವಿ: ಭಾನುವಾರದಿಂದ ಮೂರು ದಿನಗಳ ಕಾಲ ಕಿತ್ತೂರು ಉತ್ಸವ ನಡೆಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಇದೆ ಮೊದಲ ಬಾರಿಗೆ ಸರ್ಕಾರ ಕಿತ್ತೂರಿನಲ್ಲಿ ಉತ್ಸವ ಆಯೋಜಿಸಿದೆ. ಆದರೆ, ಇದಕ್ಕೆ ಬ್ರೇಕ್ ಬೀಳುತ್ತಾ ಅನ್ನೋ ಪ್ರಶ್ನೆ ಮೂಡಿದೆ.

ಜಿಲ್ಲೆಯ ಸವದತ್ತಿ ತಾಲೂಕಿನ ಬಿಜೆಪಿ ಶಾಸಕ ಹಾಗೂ ಉಪಸಭಾಪತಿ ಆನಂದ ಮಾಮನಿ ನಿಧನರಾಗಿದ್ದಾರೆ. ಹೀಗಾಗಿ ಜಿಲ್ಲಾಡಳಿತ ಸರ್ಕಾರದ ಆದೇಶಕ್ಕಾಗಿ ಕಾಯುತ್ತಿದೆ. ಯಾಕಂದರೆ ಸಂಜೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ಉತ್ಸವದಲ್ಲಿ ಭಾಗಿಯಾಗಬೇಕಿದೆ. ಉಪಸಭಾಪತಿ ನಿಧನರಾಗಿರುವುದರಿಂದ, ಸಂಭ್ರಮ ನಡೆಸಲು ಸಾಧ್ಯವೇ ಅನ್ನೋ ಪ್ರಶ್ನೆ ಮೂಡಿದೆ.

ಕಿತ್ತೂರು ಉತ್ಸವಕ್ಕೆ ಈಗಾಗ್ಲೇ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದನ್ನು ಮುಂದುವರೆಸಲಾಗುತ್ತಾ, ಮುಂದೂಡಲಾಗುತ್ತಾ ಅಥವ ಇವತ್ತು ಕೈಬಿಟ್ಟು ನಾಳೆಯಿಂದ ನಡೆಸಲಾಗುತ್ತಾ ಏನು ಅನ್ನೋದರ ಬಗ್ಗೆ ಸರ್ಕಾರದ ನಿರ್ಧಾರದ ಮೇಲೆ ನಿಂತಿದೆ.




Leave a Reply

Your email address will not be published. Required fields are marked *

error: Content is protected !!