ಕೊನೆಗೂ ‘ಕೋಟಿಗೊಬ್ಬ’ನನ್ನು ಕಣ್ತುಂಬಿಕೊಂಡ ಫ್ಯಾನ್ಸ್

216

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ನಟ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಕೋಟಿಗೊಬ್ಬ-3 ಚಿತ್ರ ವಿಜಯ ದಶಮಿಯ ದಿನ ಭರ್ಜರಿಯಾಗಿ ಬಿಡುಗಡೆಯಾಗಿದೆ. ಆಯುಧ ಪೂಜೆಯ ದಿನವೇ ಚಿತ್ರ ಬಿಡುಗಡೆಯಾಗಬೇಕಿತ್ತು. ಕೆಲ ತಾಂತ್ರಿಕ ತೊಂದರೆಗಳಿಂದ ಸಿನಿಮಾ ರಿಲೀಸ್ ಆಗಲಿಲ್ಲ. ಹೀಗಾಗಿ ಕೆಲವು ಅಭಿಮಾನಿಗಳು ಗಲಾಟೆ ಮಾಡಿದ್ದರು.

ಇಂದು ಬೆಳಗ್ಗೆಯಿಂದಲೇ ಫ್ಯಾನ್ಸ್ ಶೋ ಶುರುವಾಗಿದ್ದು, ತಮ್ಮ ಹೀರೋನ ಚಿತ್ರವನ್ನು ನೋಡಿ ಅಭಿಮಾನಿಗಳ ದಿಲ್ ಖುಷ್ ಆಗಿದೆ. ಕೋಟಿಗೊಬ್ಬ-3 ಚಿತ್ರ ರಾಜ್ಯಾದ್ಯಂತ 300 ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಿದೆ. ಈ ಮೂಲಕ ನಿನ್ನೆ ನಿರಾಸೆ ಅನುಭವಿಸಿದ ಪ್ರೇಕ್ಷಕರಿಗೆ ಇಂದು ಭರ್ಜರಿ ಕಿಕ್ ಸಿಕ್ಕಿದೆ.

ಸುದೀಪಗೆ ಜೋಡಿಯಾಗಿ ಮಡೋನಾ ಸಿಬಾಸ್ಟನ್ ಕಾಣಿಸಿಕೊಂಡಿದ್ದಾರೆ. ಆಶಿಕಾ ರಂಗನಾಥ್ ಪಟಾಕಿ ಪೋರಿಯೋ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ. ರವಿ ಶಂಕರ್ ಸೇರಿದಂತೆ ಬಹುದೊಡ್ಡ ತಾರಾ ಬಳಗವಿದೆ. ಶಿವ ಕಾರ್ತಿಕ್ ನಿರ್ದೇಶನ ಮಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತವಿದೆ. ಸೂರಪ್ಪ ಬಾಬು 70 ಕೋಟಿ ರೂಪಾಯಿಯಲ್ಲಿ ಚಿತ್ರ ನಿರ್ಮಾಣ ಮಾಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!