ಪಠ್ಯಪುಸ್ತಕದಿಂದ ಟಿಪ್ಪು ಜೊತೆಗೆ ಇವರೆಲ್ಲ ಹೊರಗೆ

353

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಪಠ್ಯಪುಸ್ತಕದಿಂದ ಮೈಸೂರು ಇತಿಹಾಸದ ಪ್ರಮುಖ ವಿಷಯವಾದ ಟಿಪ್ಪು ಸುಲ್ತಾನ್ ನ ಪಠ್ಯವನ್ನ, ಕರ್ನಾಟಕ ಪಠ್ಯ ಪುಸ್ತಕ ಸೊಸೈಟಿ ತೆಗೆದು ಹಾಕಿದೆ. ಕೋವಿಡ್ 19 ಪರಿಸ್ಥಿತಿಯಲ್ಲಿ ಸಮಯದ ಕಾರಣ ಹೇಳಿ, 7ನೇ ತರಗತಿ ಪುಸ್ತಕದಿಂದ ಟಿಪ್ಪು ವಿಷಯ ತೆಗೆದು ಹಾಕಿದೆ.

2020-21ನೇ ಸಾಲಿನ ಕೆಲಸದ ದಿನಗಳನ್ನ ಲೆಕ್ಕ ಹಾಕಿ, ಕೆಲ ಪರಿಷ್ಕರಣೆ ಮಾಡಲಾಗಿದೆ. ಅಗತ್ಯವಾದ ಪಾಠ ಹೇಳಲು ಕೆಟಿಬಿಎಸ್ 6-10ನೇ ತರಗತಿಯ ಸಮಾಜ ವಿಜ್ಞಾನ ಶಿಕ್ಷಕರಿಗೆ ಕೈಪಿಡಿ ಬಿಡುಗಡೆ ಮಾಡಲಾಗಿದೆ. ಇದರ ಜೊತೆಗೆ ಇತರೆ ವಿಷಯಗಳ ಕೈಪಿಡಿ ಸಹ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದೆ.

ಇದರ ಜೊತೆಗೆ ಬುದ್ಧ, ಯೇಸು, ಪೈಗಂಬರ್ ಅವರ ಶೇ.50ರಷ್ಟು ವಿಷಯ, ರಾಣಿ ಅಬ್ಬಕ್ಕ, ಕಲೆ, ಸಾಹಿತ್ಯ, ಜಾನಪದ, ರಂಗಭೂಮಿ, ನೃತ್ಯ, ಕಾಡು ಸೇರಿದಂತೆ ಗಂಗರು, ಕದಂಬರು, ಶಾತವಾಹನರ ಸಾಹಿತ್ಯ, ವಿಜ್ಞಾನ, ಕಲೆ ಮತ್ತು ವಾಸ್ತುಶಿಲ್ಪ, ರಜಪೂತರ ಕೊಡುಗೆಗಳನ್ನ ಸಹ ಪಠ್ಯಪುಸ್ತಕದಿಂದ ಕೈ ಬಿಡಲಾಗಿದೆ ಎನ್ನುವುದು ತಿಳಿದು ಬಂದಿದೆ.




Leave a Reply

Your email address will not be published. Required fields are marked *

error: Content is protected !!