ಕೇಂದ್ರದ ವಿರುದ್ಧ ಕಾರ್ಮಿಕ ಸಂಘಟನೆಗಳ ಮುಷ್ಕರ

705

ಸಿಂದಗಿ: ಪಟ್ಟಣದಲ್ಲಿಂದು ವಿವಿಧ ಕಾರ್ಮಿಕ ಸಂಘಟನೆಗಳು ಪ್ರತಿಭಟನಾ ಮೆರವಣಿಗೆ ನಡೆಸಿದ್ವು. ಪಟ್ಟಣದ ಅಂಬೇಡ್ಕರ್ ಸರ್ಕಲ್ ಬಳಿ ಸಿಐಟಿಯು, ಜೆಸಿಟಿಯು, ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ, ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ತಾಲೂಕು ಸಮಿತಿ ಹಾಗೂ ರೈತ ಪರ ಸಂಘಟನೆಗಳು ಸೇರಿ ಪ್ರತಿಭಟನೆ ನಡೆಸಿದ್ವು.

ಈ ವೇಳೆ ಮಾತ್ನಾಡಿದ ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾಧ್ಯಕ್ಷ ಹರ್ಷವರ್ಧನ ಪೂಜಾರಿ, ನಮ್ಮ ಹಕ್ಕುಗಳಿಗಾಗಿ ನಾವು ಹೋರಾಟ ಮಾಡೋಣ. ಇದಕ್ಕಾಗಿ ನಮ್ಮ ಮೇಲೆ ಗೋಲಿಬಾರ್ ಆದ್ರೂ ನಾವು ಅಂಜುವುದಿಲ್ಲ ಅಂತಾ ಹೇಳಿದ್ರು. ಸರ್ಕಾರಗಳು ಸಂವಿಧಾನ ಅಳಿಸುವ ಕೆಲಸ ಮಾಡ್ತಿವೆ ಅಂತಾ ಆಕ್ರೋಶ ವ್ಯಕ್ತಪಡಿಸಿದ್ರು.

ಪ್ರತಿಭಟನಾ ಮೆರವಣಿಗೆ

ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರತಿಭಾ ಕುರಡಿ ಮಾತ್ನಾಡಿ, ಇದು ನಮ್ಮ ನಿಮ್ಮ ಮುಷ್ಕರವಾಗಿದೆ. ಈ ಮೊದ್ಲು 44 ಕಾರ್ಮಿಕ ಹಕ್ಕುಗಳಿದ್ವು.ಈಗ ಇರೋದು ಕೇವಲ 4 ಮಾತ್ರ. ಇನ್ನುಳಿದ 40 ಹಕ್ಕುಗಳು ಎಲ್ಲಿ ಹೋದ್ವು ಅಂತಾ ಪ್ರಶ್ನೆ ಮಾಡಿದ್ರು. ಕಾರ್ಪೂರೇಟ್ ಕಂಪನಿಗಳಿಗೆ ಲಾಭ ಮಾಡಿಕೊಡುವ ದೃಷ್ಟಿಯಿಂದ ಕೇಂದ್ರ ಸರ್ಕಾರ ನಮ್ಮ ಹಕ್ಕುಗಳನ್ನ ಕಸಿದುಕೊಳ್ತಿದೆ. ಕೇಂದ್ರದ ಜನ ವಿರೋಧಿ ನೀತಿ ವಿರುದ್ಧ ನಮ್ಮ ಹೋರಾಟ ಅಂತಾ ಆಕ್ರೋಶ ವ್ಯಕ್ತಪಡಿಸಿದ್ರು.

ತಹಶೀಲ್ದಾರ್ ಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು

ಅಂಬೇಡ್ಕರ್ ಸರ್ಕಲ್ ನಿಂದ ಟಿಪ್ಪು ಸುಲ್ತಾನ್ ಮಾರ್ಗವಾಗಿ ವಿವೇಕಾನಂದ ಸರ್ಕಲ್ ರಸ್ತೆ ಮೂಲಕ ತಹಶೀಲ್ದಾರ್ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದ್ರು. ಬಳಿಕ ತಹಶ್ಲೀದಾರ್ ಬಿ.ಎಸ್ ಕಡಕಭಾವಿ ಅವರಿಗೆ ಮನವಿ ಪತ್ರ ಸಲ್ಲಿಸಿದ್ರು. ಈ ವೇಳೆ ಜೆಸಿಟಿಯು ಮುಖಂಡ ಭರತಕುಮಾರ, ಕಾಸಿಬಾಯಿ ಜನಗೊಂಡ, ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಸರಸ್ವತಿ ಮಠ, ಖಜಾಂಚಿ ಎಸ್.ಎಸ್ ಬಿರಾದಾರ, ಮಹಾದೇವಿ, ಗಂಗು ಹಲಗಿ, ಮಂಗಲಾ ಜಮಾದರ, ಮುಲಾಂಬಿ ಇನಾಮಾದರ ಸೇರಿದಂತೆ ಅನೇಕರು ಭಾಗವಹಿಸಿದ್ರು.




Leave a Reply

Your email address will not be published. Required fields are marked *

error: Content is protected !!