10 ದಿನಗಳಲ್ಲಿ ರಾಜ್ಯದಲ್ಲಿ ಸೋಂಕಿತರು, ಸಾವನ್ನಪ್ಪಿದವರೆಷ್ಟು ಗೊತ್ತಾ?

331

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕರೋನಾ ಸೋಂಕಿತರ ಸಂಖ್ಯೆ ಏರಿಕೆಯಾಗ್ತಿದೆ. ಹೀಗಾಗಿ ಮತ್ತೆ ಲಾಕ್ ಡೌನ್ ಚರ್ಚೆಯಾಗ್ತಿದೆ. ಮತ್ತೆ ಲಾಕ್ ಡೌನ್ ಇಲ್ಲವೆಂದು ಸರ್ಕಾರ ಹೇಳಿದ್ರೂ, ಜನರಲ್ಲಿ ಮೂಡಿರುವ ಆತಂಕ ಕಡಿಮೆಯಾಗಿಲ್ಲ.

ಸೋಂಕು ಏರಿಕೆ ಪ್ರಮಾಣ ನೋಡುತ್ತಾ ಹೋದ್ರೆ, ಎಷ್ಟೊಂದು ತೀವ್ರವಾಗಿ ವೈರಾಣು ಹರಡುತ್ತಿದೆ ಅನ್ನೋದಕ್ಕೆ ಸಾಕ್ಷಿ ಸಿಗುತ್ತೆ. ಜೂನ್ 16ರಂದು 317 ಸೋಂಕು, 17ರಂದು 204, 18ರಂದು 210, 19ರಂದು 337, 20ರಂದು 416, 21ರಂದು 453, 22ರಂದು 249, 23ರಂದು 322, 24ರಂದು 397 ಹಾಗೂ 25ರಂದು 442 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಹೀಗೆ ರಾಜ್ಯದಲ್ಲಿ ಕಳೆದ 10 ದಿನಗಳಿಂದ ಏರಿಕೆ, ಇಳಿಕೆಯೊಂದಿಗೆ ಬರೋಬ್ಬರಿ 3,347 ಜನರಲ್ಲಿ ಸೋಂಕು ಪತ್ತೆಯಾಗಿದೆ. 10,560 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರ ಜೊತೆಗೆ ಸಾವು ಕೂಡ ಏರಿಕೆ ಕಾಣ್ತಿದೆ. 10 ದಿನಗಳಲ್ಲಿ ಬರೋಬ್ಬರಿ 84 ಜನರು ಸಾವನ್ನಪ್ಪಿದ್ದಾರೆ. ಇದುವರೆಗೂ 170 ಜನ ಕೋವಿಡ್ 19ಗೆ ಬಲಿಯಾಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!