ಸಿಪಿಐ ಮೋತಿಲಾಲಗೆ ಪಿಎಚ್ ಡಿ ಪ್ರದಾನ

410

ಪ್ರಜಾಸ್ತ್ರ ಸುದ್ದಿ

ಬಾಗಲಕೋಟೆ: ಪೊಲೀಸ್ ಇನ್ಸ್ ಪೆಕ್ಟರ್ ಮೋತಿಲಾಲ್ ಅವರು ಮಂಡಿಸಿದ “ಆ್ಯನ್ ಅಂಥ್ರೋಪಾಲಾಜಿಕಲ್ ಸ್ಟಡಿ ಆಫ್ ಫಿಮೇಲ್ ಅಪೆಂಡರ್ಸ್ ಇನ್ ಕರ್ನಾಟಕ ” ಎಂಬ ಮಹಾ ಪ್ರಬಂಧಕ್ಕೆ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ ಪಿಎಚ್ ಡಿ ಪದವಿ ಪ್ರದಾನ ಮಾಡಿದೆ.

ಮೂಲತಃ ಬಾಗಲಕೋಟೆಯ ಆಲೂರ ತಾಂಡಾ ನಿವಾಸಿಯಾಗಿರುವ ಮೋತಿಲಾಲ ಪವಾರ ಅವರು, ಪ್ರಾಥಮಿಕ ಶಿಕ್ಷಣವನ್ನ ಆಲೂರಿನಲ್ಲಿ ಮುಗಿಸಿದ್ದಾರೆ. ನಂತರ ಗೋವಾದಲ್ಲಿ ಮಾಧ್ಯಮಿಕ ಶಿಕ್ಷಣ ಪೂರ್ಣಗೊಳಿಸಿದ್ದಾರೆ. ಕಾಲೇಜು ಶಿಕ್ಷಣವನ್ನು ಬಾಗಲಕೋಟೆಯಲ್ಲಿ ಪಡೆದಿದ್ದಾರೆ. ನಂತರ 2003 ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಯಾದ ಅವರು, ಕರ್ತವ್ಯನಿರತರಾದ ಸಂದರ್ಭದಲ್ಲಿ ಸರಕಾರದಿಂದ ಅನುಮತಿ ಪಡೆದು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ಪ್ರಬಂಧ ಮಂಡಿಸಿ  ಪಿಎಚ್ ಡಿ ಪದವಿ ಪಡೆದಿದ್ದಾರೆ.

ಮೋತಿಲಾಲ ಪವಾರರ ಈ ಸಾಧನೆಗೆ ಹುಟ್ಟೂರಿನ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಹರ್ಷ ವ್ಯಕ್ತಪಡಿಸಿದ್ದಾರೆ. ಮೋತಿಲಾಲ ಪವಾರರಿಗೆ ಕವಿವಿ ಮಾನವಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ.ವಿ.ಜಗದೀಶ ಅವರು ಮಾರ್ಗದರ್ಶನ ಮಾಡಿದ್ದರು.




Leave a Reply

Your email address will not be published. Required fields are marked *

error: Content is protected !!