ಸರಣಿ ಚಿತ್ರಗಳಿಗೆ ಜೋತು ಬಿದ್ದ ನಿರ್ದೇಶಕರು.

222

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸಧ್ಯ ಇಂಡಿಯನ್ ಮೂವಿಗಳ ಆರ್ಭಟ ಜೋರಾಗಿದೆ. ಟೆಕ್ನಾಲಜಿ ಬಳಸಿಕೊಂಡು ಬಿಗ್ ಬಜೆಟ್ ಸಿನಿಮಾಗಳನ್ನು ಮಾಡಲಾಗುತ್ತಿದೆ. ಆದರೆ, ಇತ್ತೀಚಿನ ಯಾವ ಸಿನಿಮಾಗಳಲ್ಲಿ ಮೂಲ ಕಥೆ ಏನು? ನಿರ್ದೇಶಕ ಏನನ್ನು ಹೇಳಲು ಹೊರಟಿದ್ದಾರೆ ಅನ್ನೋದೇ ನೋಡುಗರಿಗೆ ಅರ್ಥವಾಗದಾಗಿದೆ. ಇದರ ಜೊತೆಗೆ ಪಾರ್ಟ್ 1, 2, 3 ಎಂದು ಸರಣಿ ಚಿತ್ರಗಳಿಗೆ ನಿರ್ದೇಶಕರು ಜೋತು ಬೀಳುತ್ತಿದ್ದಾರೆ.

ಹಾಲಿವುಡ್ ಅಂಗಳದಲ್ಲಿ ಅನಾಕೊಂಡಾ, ಜಿರಾಸಿಫ್ ಪಾರ್ಕ್, ರಾಂಗ್ ಟರ್ನ್, ಫಾಸ್ಟ್ ಅಂಡ್ ಫ್ಯೂರಿಯಸ್ ಹೀಗೆ ಸಾಕಷ್ಟು ಮೂವಿಗಳು 7, 8 ಕ್ಕಿಂತ ಹೆಚ್ಚು ಸರಣಿಗಳಲ್ಲಿ ಸಿನಿಮಾ ರಿಲೀಸ್ ಆಗಿವೆ. ಈ ಟ್ರೆಂಡ್ ಇದೀಗ ಭಾರತೀಯ ಚಿತ್ರರಂಗದಲ್ಲಿ ಕಾಣಿಸಿಕೊಳ್ಳುತ್ತಿದೆ. ಸ್ಟಾರ್ ನಟರ ಮಾಸ್ ಮೂವಿಗಳು ಚಾಪ್ಟರ್ 1, 2 ಎನ್ನುತ್ತಿವೆ.

ಧೂಮ್, ಟೈಗರ್, ಶಿವ, ಆಶಿಕಿ, ಎಬಿಸಿಡಿ, ಕಾಲಾ, ಬೀಸ್ಟ್, ಸರ್ಧಾರ್, ಬಾಹುಬಲಿ, ಸಲಾರ್, ಕೆಜಿಎಫ್, ಕಾಂತಾರ, ಸಪ್ತ ಸಾಗರದಾಚೆ ಎಲ್ಲೋ ಹೀಗೆ ಎಲ್ಲ ಭಾಷೆಯ ಚಿತ್ರಗಳಲ್ಲಿ ಸರಣಿ ಚಿತ್ರಗಳ ಟ್ರೆಂಡ್ ಜೋರಾಗಿದೆ. ಇದರ ಜೊತೆಗೆ ಬೂದಿಬಣ್ಣದ ರೀತಿಯ ಮಾಸ್ ಚಿತ್ರಗಳ ಹಾವಳಿ. ಹೀಗಾಗಿಯೇ ಏನೂ ಹೊಸತನದಿಂದ ಕೂಡಿದ ಹೊಸಬರ ಚಿತ್ರಗಳು ಬಿಗ್ ಬಜೆಟ್ ಚಿತ್ರಗಳ ಎದುರು ನಿಲ್ಲಲು ಆಗದೆ ಸೋಲು ಕಾಣುತ್ತಿವೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಹೊಸತನಕ್ಕೆ ಕೈ ಹಾಕದೆ ಬರೀ ಹೊಡಿಬಡಿ, ರಕ್ತಪಾತ, ಅತೀತವಾದ ಹೀರೋಯಿಸಂ, ಊಟದಲ್ಲಿ ಉಪ್ಪಿನಕಾಯಿ ಆಗುತ್ತಿರುವ ನಟಿಯರು, ಎರಡೆರಡು ಚಿತ್ರಗಳಲ್ಲಿ ಕಥೆಯನ್ನು ತೆಗೆದುಕೊಂಡು ಮತ್ತೊಂದು ಚಿತ್ರದಲ್ಲಿ ಮಿಕ್ಸ್ ಮಾಡಿ ತೋರಿಸುವುದನ್ನು ನೋಡುತ್ತಿದ್ದರೆ ಇಲ್ಲಿ ನಿರ್ದೇಶಕರ ತಪ್ಪೋ, ನಟರು ಚಿತ್ರಗಳನ್ನು ಆಯ್ಕೆ ಮಾಡುತ್ತಿರುವ ರೀತಿ ತಪ್ಪೋ, ಇಂತಹ ಚಿತ್ರಗಳನ್ನು ಮಾತ್ರ ಜನರು ನೋಡುತ್ತಾರೆ ಎನ್ನುವ ಕಾರಣವೋ ಒಟ್ಟಿನಲ್ಲಿ ಗಿರಿಮಿಟ್ ಕಥೆಯನ್ನೇ ಉಣಬಡಿಸಲಾಗುತ್ತಿರುವುದು ಮಾತ್ರ ಸತ್ಯ.




Leave a Reply

Your email address will not be published. Required fields are marked *

error: Content is protected !!