ತಳವಾರ, ಪರಿವಾರ ಸಮಾಜದಿಂದ ಸಿಂದಗಿಯಲ್ಲಿ ಪತ್ರ ಚಳವಳಿ

393

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ನೀಡುವ ಸಂಬಂಧ, ತಳವಾರ, ಪರಿವಾರ ಸಮಾಜ ಸೇವಾ ಸಂಘದಿಂದ ಹಲವು ಹಂತಗಳಲ್ಲಿ ಹೋರಾಟ ಮಾಡಿಕೊಂಡು ಬರಲಾಗ್ತಿದೆ. ಇದೀಗ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆಯುವ ಮೂಲಕ, ಪತ್ರ ಚಳವಳಿ ನಡೆಸಲಾಯ್ತು.

ತಳವಾರ, ಪರಿವಾರ ಸಮಾಜ ಸೇವಾ ಸಂಘದ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಶರಣಪ್ಪ ಸುಣಗಾರ, ತಾಲೂಕು ಅಧ್ಯಕ್ಷ ಶ್ರೀಶೈಲ ಬುಯ್ಯರ ಅವರ ನೇತೃತ್ವದಲ್ಲಿ ಹಲವು ಹಂತಗಳಲ್ಲಿ ಹೋರಾಟ ಮಾಡಿಕೊಂಡು ಬರಲಾಗ್ತಿದೆ. ಕೇಂದ್ರ ಸರ್ಕಾರ ಎಸ್ಟಿ ಪ್ರಮಾಣ ಪತ್ರ ನೀಡಬೇಕೆಂದು ಆದೇಶಿಸಿದ್ರೂ, ರಾಜ್ಯ ಸರ್ಕಾರ ಇಲ್ಲ ಸಲ್ಲದ ಗೊಂದಲ ಸೃಷ್ಟಿ ಮಾಡಿ ತಳವಾರ, ಪರಿವಾರ ಸಮಾಜಕ್ಕೆ ಅನ್ಯಾಯ ಮಾಡಲಾಗ್ತಿದೆ ಎಂದು ಈ ವೇಳೆ ಆಕ್ರೋಶ ವ್ಯಕ್ತಪಡಿಸಲಾಯ್ತು.

ಪಟ್ಟಣದ ಅಂಚೆ ಕಚೇರಿ ಮುಂಭಾಗದಲ್ಲಿ ಸೇರಿದ ಹೋರಾಟಗಾರರು, ನೂರಾರು ಪತ್ರಗಳನ್ನ ಪ್ರಧಾನಿ ಮೋದಿಗೆ ತಲುಪಿಸುವ ಕೆಲಸ ಮಾಡಿದ್ರು. ಈ ಸಂದರ್ಭದಲ್ಲಿ ಅನಿಲ ಕಡಕೋಳ, ಶಂಕರ ಕುರಿ, ಮಾರುತಿಗೌಡ ಬಿರದಾರ, ಶರಣಬಸು ನಾಟೀಕಾರ, ಶಂಕರ ಕಡಕೋಳ, ಯಲ್ಲಪ್ಪ ಬಳುಂಡಗಿ, ರಾಜು ತಳವಾರ, ವಿಜಯ ಯಾಳವಾರ, ಮಲ್ಲು ಹಿರೋಳ್ಳಿ, ಯಮನೂರಪ್ಪ ಭೂತಿ ಸೇರಿದಂತೆ ಅನೇಕರು ಭಾಗವಹಿಸಿದ್ರು.




Leave a Reply

Your email address will not be published. Required fields are marked *

error: Content is protected !!