3 ಲೈಟ್ಸ್, 1 ಫ್ಯಾನ್ ಬಳಸುವ ಮನೆಗೆ ಬಂತು 7 ಲಕ್ಷ ಬಿಲ್.. ನಿಮ್ಗೆಷ್ಟು ಬರುತ್ತೆ ನೋಡಿ…

426

ಧಾರವಾಡ: ಕಳೆದ ಹಲವು ದಿನಗಳಿಂದ ನಾವು ಹೇಳುತ್ತಿದ್ದೇವೆ ಕೆಇಬಿ ಅವರು ಬಿಲ್ ವಸೂಲೆ ಶುರು ಮಾಡಿದ್ದಾರೆ ಎಂದು. ಇದು ವ್ಯಾಪಕ ಸುದ್ದಿಯಾದ್ಮೇಲೆ ಕೆಇಬಿ ಎಂಡಿ ಅವರು ಸುದ್ಧಿಗೋಷ್ಠಿ ನಡೆಸಿ ಗೊಂದಲ ನಿವಾರಿಸುವ ಪ್ರಯತ್ನ ಮಾಡಿದ್ದಾರೆ. ಆದ್ರೂ ಯಡವಟ್ಟು ಬಿಲ್ ನೀಡುವುದು ನಿಂತಿಲ್ಲ. 10, 100 ರೂಪಾಯಿ ವ್ಯತ್ಯಾಸ ಬಂದರೆ ಸುಮ್ಮನಾಗಬಹುದು. ಇಲ್ಲೊಬ್ಬರ ಮನೆಗೆ ಬರೋಬ್ಬರಿ 7 ಲಕ್ಷಕ್ಕೂ ಅಧಿಕ ಮೊತ್ತದ ಬಿಲ್ ಬಂದಿದೆ.

ಮೂರು ಲೈಟ್ಸ್, ಒಂದು ಫ್ಯಾನ್ ಬಳಸುವ ಮನೆಗೆ ಹೆಸ್ಕಾಂ ಯಡವಟ್ಟನಿಂದಾಗಿ 7 ಲಕ್ಷದ 64 ಸಾವಿರದ 581 ರೂಪಾಯಿ ಬಿಲ್ ಬಂದಿದೆ. ಧಾರವಾಡದ ಆರ್ಯ ಓಣಿಯ ರಾಜು ಬಿರ್ಜಣ್ಣವರ ಎಂಬುರಿಗೆ ಬಂದ ಬಿಲ್ ನೋಡಿ ಅವರಿಗೆ ಕರೆಂಟ್ ಶಾಕ್ ಹೊಡೆದಂತಾಗಿದೆ.

ಇದು ಬರೀ ಇವರೊಬ್ಬರ ಮನೆ ಕಥೆಯಲ್ಲ, ಈ ಓಣಿಯ ಬಹುತೇಕ ಮನೆಯ ಬಿಲ್ ಡಬಲ್, ತ್ರಿಬಲ್ ಬಂದಿದೆಯಂತೆ. ಹೀಗಾಗಿ ಸ್ಥಳೀಯರು ಹೆಸ್ಕಾಂಗೆ ಬಿಲ್ ವಾಪಸ್ ಮಾಡಿದ್ದಾರೆ. ಮೀಟರ್ ನೋಡಿ ಬಿಲ್ ಕೊಡಲು ಬಂದವನ ತಲೆಯಲ್ಲಿ ಏನಿರುತ್ತೆ. ಸಣ್ಣ ಮನೆಗೆ 7 ಲಕ್ಷದ 64 ಸಾವಿರದ 581 ರೂಪಾಯಿ ಬಿಲ್ ಬಂದಿದೆ. ಅದನ್ನ ಪರಿಶೀಲನೆ ಮಾಡುವುದು ಬಿಟ್ಟು, ಅವರಿಗೆ ಕೊಟ್ಟು ಹೋಗಿದ್ದಾನೆ ಅಂದ್ರೆ, ವಿದ್ಯುತ್ ಇಲಾಖೆ ಸಿಬ್ಬಂದಿ ನಿರ್ಲಕ್ಷ್ಯ, ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.




Leave a Reply

Your email address will not be published. Required fields are marked *

error: Content is protected !!