ಮಹಾರಾಷ್ಟ್ರದಿಂದ ರಾಜ್ಯಕ್ಕೆ ಕಾರ್ಮಿಕರು ಆಗಮನ: ಸೋಂಕು ಹೆಚ್ಚಾಗುವ ಭೀತಿ!

333

ಬೆಂಗಳೂರು: ರಾಜ್ಯದಲ್ಲಿ ಈಗಾಗ್ಲೇ ಕರೋನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಮೊದಲು ಒಂದು ಹಂತಕ್ಕೆ ಕಂಟ್ರೋಲ್ ಬಂದಿದೆ ಎನ್ನುವಷ್ಟರಲ್ಲಿ, ಮತ್ತೆ ಹೆಚ್ಚಾಗುತ್ತಿದೆ. ಹೀಗಾಗಿ ಸೋಂಕಿತರ ಸಂಖ್ಯೆ ಸಾವಿರದ ಗಡಿಗೆ ಬಂದು ನಿಂತಿದೆ. ಇದರ ನಡುವೆ ಮತ್ತೊಂದು ಆತಂಕ ಶುರುವಾಗಿದೆ.

ದೇಶದಲ್ಲೇ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಸೋಂಕಿತರು ಹಾಗೂ ಸಾವಿನ ಪ್ರಕರಣಗಳು ನಡೆದಿವೆ. ಇದೀಗ ವಲಸೆ ಕಾರ್ಮಿಕರಿಗೆ ಅವರ ಊರುಗಳಿಗೆ ತೆರಳಲು ಅವಕಾಶ ಮಾಡಿರುವುದ್ರಿಂದ, ರಾಜ್ಯಕ್ಕೆ ನೆರೆಯ ಮಹಾರಾಷ್ಟ್ರದಿಂದ ಬರುವವರ ಸಂಖ್ಯೆ ಹೆಚ್ಚಾಗಿದ್ದು, ಸೋಂಕಿನ ಆತಂಕ ಮೂಡಿದೆ.

ಅದರಲ್ಲೂ ಉತ್ತರ ಕರ್ನಾಟಕ ಭಾಗದ ವಿಜಯಪುರ, ಬಾಗಲಕೋಟೆ, ಕಲಬುರಗಿ, ಕೊಪ್ಪಳ ಜಿಲ್ಲೆಗಳ ಜನರು ಹೆಚ್ಚಾಗಿ ಮಹಾರಾಷ್ಟ್ರದ ಪುಣೆ, ಸತಾರ್, ಸಾಂಗ್ಲಿ, ಮಿರಜ್ ಗೆ ತೆರಳುತ್ತಾರೆ. ಇನ್ನು ದಕ್ಷಿಣ ಕನ್ನಡ ಹಾಗೂ ಉತ್ತರ ಕರ್ನಾಟಕ ಭಾಗದ ಜನರು ಮುಂಬೈಗೆ ಹೆಚ್ಚಿನ ಸಂಖ್ಯೆಯಲ್ಲಿ ಹೋಗ್ತಾರೆ. ಇದೀಗ ಅಲ್ಲಿ ಕೆಲಸಕ್ಕೆ ಹೋದವರು ವಾಪಸ್ ಆಗ್ತಿದ್ದು, ರಾಜ್ಯದಲ್ಲಿಯೂ ಸೋಂಕಿತರ ಸಂಖ್ಯೆ ಹೆಚ್ಚಿಗೆ ಆಗುತ್ತಾ ಅನ್ನೋ ಭಯ ಜನರಲ್ಲಿ ಆವರಿಸಿಕೊಂಡಿದೆ.

ಇನ್ನು ವಿದೇಶಗಳಲ್ಲಿ ಸಿಲುಕಿಹಾಕಿಕೊಂಡಿರುವವರನ್ನ ಸಹ ಕರೆದುಕೊಂಡು ಬರಲಾಗ್ತಿದೆ. ಈಗಾಗ್ಲೇ ನೂರಾರು ಸಂಖ್ಯೆಯಲ್ಲಿ ಭಾರತೀಯರು ರಾಜ್ಯಕ್ಕೆ ಬಂದಿದ್ದಾರೆ. ಅವರನ್ನ ಕಡ್ಡಾಯವಾಗಿ 14 ದಿನ ನಿಗದಿತ ಸ್ಥಳದಲ್ಲಿ ಗೃಹ ಬಂಧನ ಎನ್ನಲಾಗ್ತಿದೆ. ಆದ್ರೂ, ಸೋಂಕಿನ ಭಯ ಇಲ್ಲವೆಂದು ಹೇಳಲು ಸಾಧ್ಯವಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಈ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸದೆ, ಕಟ್ಟುನಿಟ್ಟಿನ ಕ್ರಮಗಳನ್ನ ತೆಗೆದುಕೊಳ್ಳಬೇಕಿದೆ. ಇಲ್ಲದೆ ಹೋದ್ರೆ ಕರುನಾಡಲ್ಲಿಯೂ ಕರೋನಾದ ಅಟ್ಟಹಾಸ ಮುಂದುವರೆಯುತ್ತೆ.




Leave a Reply

Your email address will not be published. Required fields are marked *

error: Content is protected !!