ಅಂದು ಕಾಲ್ ಗರ್ಲ್.. ಇಂದು ಬಿಟೌನ್ ಸ್ಟಾರ್ ರೈಟರ್

801

ಈ ಜಗತ್ತು ತುಂಬಾ ವಿಚಿತ್ರವಾಗಿದೆ. ಯಾವ ಟೈಂನಲ್ಲಿ ಯಾರ ಬದುಕು ಹೇಗೆ ಬದಲಾಗುತ್ತೆ ಅನ್ನೋದು ಗೊತ್ತಾಗುವುದಿಲ್ಲ. ಹೀಗಾಗಿ ಇಲ್ಲಿ ಗೆಲುವಿಗಾಗಿ ನಿತ್ಯ ಹೋರಾಡಬೇಕು. ಹೀಗೆ ಹೋರಾಡಿ ಇಂದು ಬಾಲಿವುಡ್ ಸಿನಿ ದುನಿಯಾದ ಸ್ಟಾರ್ ಸಿನ್ಮಾ ರೈಟರ್ ಆಗಿದ್ದಾರೆ ಅಂದು ಕಾಲ್ ಗರ್ಲ್ ಆಗಿದ್ದವಳು.

ಸನ್ನಿ ಲಿಯೋನಾ ಯಾರಿಗೆ ಗೊತ್ತಿಲ್ಲ. ನೀಲಚಿತ್ರಗಳಲ್ಲಿ ನಟಿಸಿದಾಕೆ. ಪಡ್ಡೆ ಹುಡ್ಗರ ರಹಸ್ಯರಾಣಿ ಇವಳು. ಹಿಂದಿಯ ಬಿಗ್ ಬಾಸ್ ಮೂಲಕ ಬಿಟೌನ್ ಎಂಟ್ರಿ ಪಡೆದ ಸನ್ನಿ ಲಿಯೋನಾ ನಟಿಯಾದ್ಳು. ಮಾಜಿ ಪೋರ್ನ್ ಸ್ಟಾರ್ ಎಂದು ಕರೆಸಿಕೊಂಡ್ಳು. ಅದೆ ರೀತಿ ಶಗುಪ್ತಾ ರಫಿಕಿ ಅನ್ನೋ ಲೇಡಿ, ಅಂದು ಮುಂಬೈನಲ್ಲಿ ವೇಶ್ಯೆ ಆಗಿದ್ದವಳು ಇಂದು ಸಿನ್ಮಾಗಳಿಗೆ ಕಥೆ ಬರೆಯುವ ಸೂಪರ್ ಸ್ಟಾರ್ ರೈಟರ್ ಆಗಿದ್ದಾಳೆ.

ಶಗುಫ್ತಾ ರಫಿಕಿಗೆ ಹೆತ್ತವರು ಗೊತ್ತಿಲ್ಲ. ಮಹಿಳೆಯೊಬ್ಬಳು ಸಾಕಿದ್ಳು. ಆಕೆ ಒಬ್ಬನೊಂದಿಗೆ ಅಕ್ರಮ ಸಂಬಂಧ ಹೊಂದಿದ್ಳು. ಅವನು ಅಕಾಲಿಕವಾಗಿ ಸಾವನ್ನಪ್ಪಿದ್ಮೇಲೆ ಶಗುಫ್ತಾ, 11ನೇ ವಯಸ್ಸಿಗೆ ಬಾರ್ ನಲ್ಲಿ ಡ್ಯಾನ್ಸ್ ಮಾಡಲು ಶುರು ಮಾಡಿದ್ಳು. 17ನೇ ವಯಸ್ಸಿಗೆ ಮದ್ವೆಯಾದ್ಳು. ಆದ್ರೆ, ಆತ ಕೊಡ್ತಿದ್ದ ಹಿಂಸೆಯನ್ನ ತಾಳಲಾರದೆ ಆಚೆ ಬಂದ್ಳು. ಮುಂಬೈನ ರೆಡ್ ಏರಿಯಾ ಸ್ವಾಗತಿಸಿತು. ಶಗುಫ್ತಾ ವೇಶ್ಯೆಯಾಗಿ ಬದಲಾದ್ಳು. ದುಬೈಗೆ ಹಾರಿ ಅಲ್ಲಿಯೂ ಇದೆ ವೃತ್ತಿ ಮಾಡಿದ್ಳು. ಅಲ್ಲಿ ಆಕೆಗಿಂತ 20 ವರ್ಷ ದೊಡ್ಡವನಾದವನು ಮದ್ವೆಯಾಗಲು ಮುಂದೆ ಬಂದ. ರಫಿಕಿ ಓಕೆ ಅಂದಿದ್ಳು, ವಿಧಿ ಅವನನ್ನ ಕರೆದುಕೊಂಡಿತು. ಮತ್ತೆ ವಾಪಸ್ ಮುಂಬೈಗೆ ಬಂದು ಬಾರ್ ಡ್ಯಾನ್ಸರ್ ಆದ್ಳು.

ನಿರ್ದೇಶಕ, ನಿರ್ಮಾಪಕ ಮಹೇಶ ಭಟ್ ಜೊತೆಲ್ಲಿ

ಹೀಗೆ ಸಾಕಷ್ಟು ಕಷ್ಟ, ನೋವು, ಅವಮಾನ ಅನುಭವಿಸುತ್ತಾ ಬೆಳೆದ ಶಗುಫ್ತಾ ರಫಿಕಿ, ಅದನ್ನ ಕಥೆಯನ್ನಾಗಿ ಅಕ್ಷರ ರೂಪಕ್ಕೆ ಇಳಿಸುತ್ತಾ ಬಂದ್ಳು. ತಾನು ಕಂಡ ಕ್ರೂರ ಜಗತ್ತಿನ ಬಗ್ಗೆ ಕಥೆಗಳನ್ನ ಬರೆಯುಲು ಶುರು ಮಾಡಿದ್ಳು. ಅವುಗಳನ್ನ ಸಿನ್ಮಾಗಾಗಿ ಪ್ರಯತ್ನಿಸುವಾಗ, ನಿರ್ದೇಶಕ, ನಿರ್ಮಾಪಕ ಮಹೇಶ ಭಟ್ ಆಕೆಗೆ ಚಾನ್ಸ್ ಕೊಟ್ಟ. ಅಲ್ಲಿಂದ ಸಿನಿ ಕರಿಯರ್ ಶುರು ಮಾಡಿದ ಶಗುಫ್ತಾ, 19 ಹಿಂದಿ, 1 ತೆಲುಗು ಚಿತ್ರಕ್ಕೆ ಕಥೆ ಬರೆದು ಕೊಟ್ಟಳು. ವೋಹ್ ಲಮ್ಹೆ, ರಾಜ್ 2 ಹಾಗೂ 3, ಆಶಿಕಿ 2, ಮರ್ಡರ್ 2, ಅಂಕುರ್ ಅರೋರಾ ಮರ್ಡರ್ ಕೇಸ್ ಚಿತ್ರಗಳಿಗೆ ಕಥೆ ಬರೆದ್ಳು. ಸಿನ್ಮಾಗಳೆಲ್ಲವೂ ಸೂಪರ್ ಹಿಟ್ ಆದ್ವು.

ಬಿಟೌನ್ ನಟ, ನಟಿ, ನಿರ್ದೇಶಕ, ನಿರ್ಮಾಪಕರ ಜೊತೆ

ಪಂಜಾಬಿಯಲ್ಲಿ ದುಶ್ಮನ್, ಬಂಗಾಳಿಯಲ್ಲಿ ಮೋನ್ ಜಾನೆ ನಾ ಹಾಗೂ ಸೆವೆನ್ ಅನ್ನೋ ಚಿತ್ರಗಳಿಗೆ ಆಕ್ಷನ್ ಕಟ್ ಸಹ ಹೇಳಿದ್ಳು. ಇದೀಗ ಸೆವೆನ್ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಇದಕ್ಕೆ ಹೇಳೋದು, ಯಾರ ಲೈಫ್ ಯಾವ ಟೈಂನಲ್ಲಿ ಬದಲಾಗುತ್ತೆ ಅಂತ. ಅಂದು ಹೊಟ್ಟೆಪಾಡಿಗೆ ಮೈಮಾರಿಕೊಳ್ಳುತ್ತಿದ್ದವಳು ಇಂದು ಸೂಪರ್ ರೈಟರ್, ಡೈರೆಕ್ಟರ್ ಪದವಿ ಗಿಟ್ಟಿಸಿದ್ದಾಳೆ.




Leave a Reply

Your email address will not be published. Required fields are marked *

error: Content is protected !!