ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಬೆಂಗಳೂರು: ಬಾಲಿವುಡ್ ಸೂಪರ್ ಸ್ಟಾರ್ ಹಿರಿಯ ನಟ ಅಮಿತಾಬ್ ಬಚ್ಚನ್ ಅವರ ಹೆಸರಿನಲ್ಲಿದ್ದ ಐಷಾರಾಮಿ ಕಾರ್ ಸೀಜ್ ಮಾಡಲಾಗಿದೆ. ಯುಬಿ ಸಿಟಿಯಲ್ಲಿ ಬಿಗ್ ಬಿ ಹೆಸರಿನಲ್ಲಿ ನೋಂದಾಣಿಯಾಗಿದ್ದ ರೋಲ್ಸ್ ರಾಯ್ ಕಾರಿನ ಸೂಕ್ತ ದಾಖಲೆ ಇಲ್ಲದ ಕಾರಣ ಜಪ್ತಿ ಮಾಡಲಾಗಿದೆ.
ಮಹಾರಾಷ್ಟ್ರದ ನೋಂದಣಿ ಹೊಂದಿರುವ ಕಾರಿನ ಸೂಕ್ತ ದಾಖಲೆ ನೀಡುವಂತೆ ಸಾರಿಗೆ ಇಲಾಖೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಆರ್ ಟಿಒ ಇನ್ಸ್ ಪೆಕ್ಟರ್ ತಿಪ್ಪೇಸ್ವಾಮಿ ನೇತೃತ್ವದಲ್ಲಿ ಮೂರು ಕಾರುಗಳನ್ನ ಜಪ್ತಿ ಮಾಡಲಾಗಿದೆ.