ಬಾಲಿವುಡ್ ನಿರ್ದೇಶಕ ಸತೀಶ್ ಕೌಶಿಕ್ ನಿಧನ

122

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬಾಲಿವುಡ್ ನಟ, ನಿರ್ದೇಶಕ ಸತೀಶ್ ಕೌಶಿಕ್(66) ಗುರುವಾರ ಮುಂಜಾನೆ ನಿಧನರಾಗಿದ್ದಾರೆ. ನಟ, ನಿರ್ದೇಶಕನಾಗುವುದಕ್ಕೂ ಮೊದಲು ಸಿನಿಮಾ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ಹಾಸ್ಯ ನಟನಾಗಿಯೂ ಕಾಣಿಸಿಕೊಂಡಿದ್ದರು.

1987ರಲ್ಲಿ ಮಿಸ್ಟರ್ ಇಂಡಿಯಾ, 1997ರಲ್ಲಿ ದೀವಾನಾ ಮಸ್ತಾನಾ, 2007ರಲ್ಲಿ ಬ್ರೀಕ್ ಲೇನ್ ಚಿತ್ರಗಳು ಸಾಕಷ್ಟು ಜನಪ್ರಿಯತೆ ತಂದು ಕೊಟ್ಟವು. 1990ರ ರಾಮ್ ಲಖನ್, 1997ರ ಸಾಜನ್ ಚಲೆ ಸಸುರಲ್ ಚಿತ್ರದಲ್ಲಿನ ಹಾಸ್ಯ ನಟನೆಗಾಗಿ ಫಿಲ್ಮ್ ಫೇರ್ ಪ್ರಶಸ್ತಿ ಪಡೆದಿದ್ದಾರೆ.

ನಟ, ನಿರ್ದೇಶಕ ಸತೀಶ್ ಕೌಶಿಕ್ ನಿಧನಕ್ಕೆ ಬಾಲಿವುಡ್ ಸಿನಿ ಮಂದಿ ಕಂಬನಿ ಮಿಡಿದಿದ್ದಾರೆ. ಸ್ನೇಹಿತ ಅನುಪಮ್ ಖೇರ್ ಭಾವನಾತ್ಮಕ ಟ್ವೀಟ್ ಮಾಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!