ವಿಧಾನಸಭಾ ಚುನಾವಣೆ: ಚುನಾವಣಾ ಆಯೋಗ ಸಭೆ

125

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ಸಂಬಂಧ ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಗಳು ರಾಜ್ಯಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಲಿದ್ದಾರೆ. ಜೊತೆಗೆ ಮಧ್ಯಾಹ್ನ ರಾಷ್ಟ್ರೀಯ ಹಾಗೂ ರಾಜ್ಯ ಪಕ್ಷಗಳೊಂದಿಗೆ ಸಭೆ ನಡೆಸಲಿದೆ.

ಭಾರತೀಯ ಚುನಾವಣಾ ಆಯೋಗವು ಮಧ್ಯಾಹ್ನ 2.30ರಿಂದ 4 ಗಂಟೆಯ ತನಕ ಒಂದೊಂದು ಪಕ್ಷದೊಂದಿಗೆ ಸುಮಾರು 10 ನಿಮಿಷಗಳ ಕಾಲ ಸಭೆ ನಡೆಸಲಿದೆ. ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್, ಬಿಎಸ್ಪಿ, ಬಿಜೆಪಿ, ಸಿಪಿಎಂ, ಸಿಪಿಎಂ ಮ್ಯಾಕ್ಸಿಸ್, ಕಾಂಗ್ರೆಸ್, ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ, ನ್ಯಾಷನಲ್ ಪೀಪಲ್ಸ್ ಪಾರ್ಟಿ, ಜೆಡಿಎಸ್ ಜೊತೆಗೆ ಸಭೆ ನಡೆಸಲಿದೆ.

ಈ ತಿಂಗಳಲ್ಲಿಯೇ ಚುನಾವಣಾ ದಿನಾಂಕ ಘೋಷಣೆಯಾಗುವ ಸಾಧ್ಯತೆಯಿದೆ. ಯಾಕಂದರೆ, ಮೇ ತಿಂಗಳಲ್ಲಿ ಸರ್ಕಾರದ ಅವಧಿ ಮುಗಿಯಲಿದೆ. ಚುನಾವಣೆ ನಡೆಸಲು 45 ದಿನಗಳ ಸಮಯವಾದರು ಬೇಕು. ಮಾರ್ಚ್ ಮಧ್ಯದಲ್ಲಿ ದಿನಾಂಕ ಘೋಷಿಸುವ ಸಾಧ್ಯತೆಯಿದೆ.




Leave a Reply

Your email address will not be published. Required fields are marked *

error: Content is protected !!