ಇಸ್ರೇಲ್ ನಲ್ಲಿ ಬಾಲಿವುಡ್ ನಟಿ ನಾಪತ್ತೆ

274

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಇಸ್ರೇಲ್ ಹಾಗೂ ಹಮಾಸ್ ಮೇಲೆ ಪ್ಯಾಲೆಸ್ತೀನ್ ಉಗ್ರರು ದಾಳಿ ನಡೆಸಿದ್ದು, 300ಕ್ಕೂ ಹೆಚ್ಚು ಜನರು ಮೃತ ಪಟ್ಟಿದ್ದಾರೆ. ನಾವು ಯುದ್ಧಕ್ಕೆ ಸಿದ್ಧರಾಗಿದ್ದು, ನೀವು ಸಿದ್ಧರಾಗಿ ಎಂದು ಎಚ್ಚರಿಕೆ ನೀಡಲಾಗಿದೆ. ಇಂತಹ ಯುದ್ಧ ಪೀಡಿತ ಪ್ರದೇಶದಲ್ಲಿ ಬಾಲಿವುಡ್ ನಟಿ ನುಶ್ರತ್ ಭರುಚಾ ನಾಪತ್ತೆಯಾಗಿದ್ದಾರೆ.

ಹೈಫಾ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಭಾಗವಹಿಸಲು ನಟಿ ನುಶ್ರತ್ ಇಸ್ರೇಲ್ ಗೆ ತೆರಳಿದ್ದರು. ಶನಿವಾರ ಮಧ್ಯಾಹ್ನ ಅವರೊಂದಿಗೆ ಫೋನ್ ನಲ್ಲಿ ಮಾತನಾಡಿದ ಬಳಿಕ ನಂತರ ಸಂಪರ್ಕಕ್ಕೆ ಸಿಗಲಿಲ್ಲವೆಂದು ಹೇಳಲಾಗುತ್ತಿದೆ.

ನಟಿ ನುಶ್ರತ್ ಸಂಕಷ್ಟಕ್ಕೆ ಸಿಲುಕಿದ್ದಾರೆ ಎನ್ನಲಾಗುತ್ತಿದೆ. ನಟಿ ಎಲ್ಲಿ ಇದ್ದಾರೆ ಏನು ಕಥೆ ಅನ್ನೋದು ಯಾವುದೂ ತಿಳಿದು ಬರುತ್ತಿಲ್ಲ ಎಂದು ನಟಿಯೊಂದಿಗೆ ತೆರಳಿದ ತಂಡದಿಂದ ಮಾಹಿತಿ ಸಿಕ್ಕಿದೆಯಂತೆ. ಜನ್ ಹಿತ್ ಮೇ ಜಾರಿ, ಡ್ರೀಮ್ ಗರ್ಲ್, ಸೆಲ್ಫಿ, ಅಕೇಲಿ ಅನ್ನೋ ಚಿತ್ರಗಳಲ್ಲಿ ನಟಿ ನುಶ್ರತ್ ಭರುಚಾ ನಟಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!