ಅಮಿತಾಬ್ ಬಚ್ಚನ್ ವಿರುದ್ಧ ಸಿಎಐಟಿಗೆ ದೂರು

188

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ವಿರುದ್ಧ ವ್ಯಾಪಾರಸ್ಥರ ಸಂಘಟನೆ ದೂರು ನೀಡಿದೆ. ಕಾರಣ, ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ಜಾಹೀರಾತಿನಲ್ಲಿ ಗ್ರಾಹಕರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ಆರೋಪಿಸಿ ದೂರು ಸಲ್ಲಿಸಲಾಗಿದೆ.

ಅಮಿತಾಬ್ ಬಚ್ಚನ್ ಕಾಣಿಸಿಕೊಂಡಿರುವ ಜಾಹೀರಾತಿನಲ್ಲಿ ಬಚ್ಚನ್ ಹೇಳಿರುವ ಮಾತಿಗೆ ವಿರೋಧ ವ್ಯಕ್ತವಾಗಿದೆ. ರಿಟೇಲ್ ಮಳಿಗೆಯಲ್ಲೂ ಇಂತಹ ಆಫರ್ ಸಿಗೋದಿಲ್ಲವೆಂದು ಹೇಳಿದ್ದು, ಇದೊಂದು ಸುಳ್ಳು. ಇದರಿಂದ ಸಣ್ಣ ವ್ಯಾಪಾರಿಗಳಿಗೆ ಹೊಡೆತ ಬೀಳಲಿದೆ. ಗ್ರಾಹಕರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಮಾಡಲಾಗಿದೆ. ಹೀಗಾಗಿ ಅವರಿಗೆ 10 ಲಕ್ಷ ರೂಪಾಯಿ ದಂಡ ವಿಧಿಸಬೇಕು. ಕಂಪನಿಗೆ ದೊಡ್ಡ ಮೊತ್ತದ ದಂಡ ಹಾಕಬೇಕು ಎಂದು ದೂರು ಸಲ್ಲಿಸಲಾಗಿದೆ.

ಈ ಕುರಿತಂತೆ ಜಾಹೀರಾತಿನಲ್ಲಿ ಕಾಣಿಸಿಕೊಂಡ ನಟ ಅಮಿತಾಬ್ ಬಚ್ಚನ್ ಆಗಲಿ, ಫ್ಲಿಪ್ ಕಾರ್ಟ್ ಕಂಪನಿಗೆ ಸಂಬಂಧಿಸಿದವರಾಗಿ ಇದುವರೆಗೂ ಪ್ರತಿಕ್ರಿಯೆ ನೀಡಿಲ್ಲ.




Leave a Reply

Your email address will not be published. Required fields are marked *

error: Content is protected !!