ಬಡವರ ಬದುಕು ಕಸಿದುಕೊಂಡ ಕರೋನಾಗೆ ಹರಿಪ್ರಿಯಾ ಥ್ಯಾಂಕ್ಸ್ ಹೇಳಿದ್ದೇಕೆ?

317

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಕರೋನಾ ಲಾಕ್ ಡೌನ್ ನಿಂದಾಗಿ ಸಿನಿ ಪ್ರಪಂಚ ಸ್ತಬ್ಧವಾಗಿತ್ತು. ಸದಾ ಸುದ್ದಿಯಲ್ಲಿರುವ ಕಲರ್ ಫುಲ್ ಲೋಕ ಸೈಲೆಂಟ್ ಆಗಿದ್ರಿಂದ, ಸಿನಿ ತಾರೆಯರು ಮನೆಯಲ್ಲಿ ಒಂದಿಷ್ಟು ಹೊಸ ಹೊಸ ಕೆಲಸಗಳಿಗೆ ಕೈ ಹಾಕಿದ್ರು. ಈಗ ಶೂಟಿಂಗ್ ಶುರುವಾಗಿದೆ. ಕಲಾವಿದರು ಮತ್ತೆ ಸೆಟ್ ಗೆ ಬರ್ತಿದ್ದು ಕ್ಯಾಮೆರಾ ಮುಂದೆ ಕಾಣಿಸಿಕೊಳ್ತಿದ್ದಾರೆ.

ನಟಿ ಹರಿಪ್ರಿಯಾ ಸಹ ಶೂಟಿಂಗ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ಸಾಟಾಗ್ರಾಮ್ ನಲ್ಲಿ ಬರೆದಿರುವ ನಟಿ, ಮತ್ತೆ ಕೆಲಸದತ್ತ.. ಸೆಟ್, ಮೇಕಪ್, ವ್ಯಾನಿಟಿ ವ್ಯಾನ್, ಸಿಬ್ಬಂದಿ, ಎಲ್ಲದಕ್ಕಿಂತ ಹೆಚ್ಚಾಗಿ ಕ್ಯಾಮೆರಾವನ್ನ ಮಿಸ್ ಮಾಡಿಕೊಳ್ತಿದ್ದೆ. ಕಳೆದ ವರ್ಷ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಸಾಕಾಗಿತ್ತು. ಕರೋನಾ ವೈರಸ್ ಗೆ ಧನ್ಯವಾದ ಹೇಳುತ್ತೇನೆ. 6 ತಿಂಗಳು ರೆಸ್ಟ್ ನೀಡಿದೆ. ಇದೀಗ ವಾಪಸ್ ಸೆಟ್ ಗೆ ಬಂದಿದ್ದೇನೆ ಶೂಟಿಂಗ್ ನಲ್ಲಿದ್ದೇನೆ. ಆದ್ರೆ, ಇದು ಸಿನಿಮಾ ಅಲ್ಲ. ಏನೆಂದು ಗೆಸ್ ಮಾಡಿ ಅಂತಾ ಹೇಳಿದ್ದಾರೆ. ಆದ್ರೆ, ಇದರ ಜೊತೆಗೆ ಕರೋನಾಗೆ ಥ್ಯಾಂಕ್ಸ್ ಹೇಳಿದ್ದಾರೆ.

ನಟ, ನಟಿಯರಿಗೆ, ದುಡ್ಡು ಇದ್ದವರಿಗೆ ಕರೋನಾ ವೈರಸ್ ರೆಸ್ಟ್ ಕೊಟ್ಟಿರಬಹುದು. ಆದ್ರೆ, ಬಡ ಕಾರ್ಮಿಕರು, ದಿನಗೂಲಿಕಾರರು, ತುತ್ತಿನ ಊಟಕ್ಕೂ ಪರದಾಡ್ತಿರುವವರಿಗೆ ಕರೋನಾದಿಂದ ಉಪಕಾರವಾಗಿಲ್ಲ. ಜೀವನ, ಕನಸು ಎಲ್ಲವನ್ನ ಕಸೆದುಕೊಂಡಿದೆ ಅನ್ನೋದು ಮಾತ್ರ ಸತ್ಯ.




Leave a Reply

Your email address will not be published. Required fields are marked *

error: Content is protected !!