ಐಪಿಎಲ್ ನಿಂದ ರೈನಾ ಔಟ್: ಸಿಎಸ್ಕೆ ನೀಡಿದ ಕಾರಣವೇನು?

368

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಇಂಡಿಯನ್ ಕ್ರಿಕೆಟ್ ಟೀಂನ ಮಾಜಿ ಆಟಗಾರ ಸುರೇಶ ರೈನಾ, ಈ ಬಾರಿಯ ಐಪಿಎಲ್ ಟೂರ್ನಿಯಿಂದ ಹೊರ ನಡೆದಿದ್ದಾರೆ. ಈ ಬಗ್ಗೆ ಚೆನ್ನೈ ಸೂಪರ್ ಕಿಂಗ್ಸ್ ತನ್ನ ಅಧಿಕೃತ ಟ್ವೀಟರ್ ನಲ್ಲಿ ಪೋಸ್ಟ್ ಮಾಡುವ ಮೂಲಕ ದೃಢಪಡಿಸಿದೆ.

ಈಗಾಗ್ಲೇ ದುಬೈಗೆ ತೆರಳಿದ್ದ ರೈನಾ ವೈಯಕ್ತಿಕ ಕಾರಣಗಳಿಂದ ವಾಪಸ್ ಭಾರತಕ್ಕೆ ಬರ್ತಿದ್ದಾರಂತೆ. ಹೀಗಾಗಿ ಈ ಬಾರಿಯ ಐಪಿಎಲ್ ನಲ್ಲಿ ಅವರು ಲಭ್ಯ ಇರುವುದಿಲ್ಲ. ಚೆನ್ನೈ ಸೂಪರ್ ಕಿಂಗ್ಸ್ ಟೀಂ ಸಂಪೂರ್ಣವಾಗಿ ಸುರೇಶ ರೈನಾ ಹಾಗೂ ಅವರ ಕುಟುಂಬದೊಂದಿಗೆ ಇರುತ್ತದೆ ಎಂದು ಸಿಎಸ್ಕೆ ಸಿಇಒ ಕೆ.ಎಸ್ ವಿಶ್ವನಾಥನ್ ತಿಳಿಸಿದ್ದಾರೆ.

ಆಗಸ್ಟ್ 15ರಂದು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ರೈನಾ, ಐಪಿಎಲ್ ಟೂರ್ನಿಗಾಗಿ ಆಗಸ್ಟ್ 21ರಂದು ದುಬೈಗೆ ತೆರಳಿದ್ರು. ಅಲ್ಲಿ ಬಿಸಿಸಿಐ ನಿಯಮದಂತೆ ಕ್ವಾರಂಟೈನ್ ಆಗಿದ್ರು. ಆದ್ರೆ, ಇದೀಗ ವೈಯಕ್ತಿಕ ಕಾರಣಗಳಿಂದ ವಾಪಸ್ ಆಗ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!