ರಿಷಬ್ ಪಂತ್ ಭೇಟಿಯಾದ ಮಾಜಿ ಆಟಗಾರರು

265

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಕಳೆದ ಡಿಸೆಂಬರ್ 20ರಂದು ಭೀಕರ ಕಾರು ಅಪಘಾತದಲ್ಲಿ ತೀವ್ರ ಗಾಯಗೊಂಡು ಹಲವು ಶಸ್ತ್ರಚಿಕಿತ್ಸೆಗೆ ಒಳಗಾಗಿ ಚೇತರಿಸಿಕೊಳ್ಳುತ್ತಿರುವ ಟೀಂ ಇಂಡಿಯಾ ವಿಕೆಟ್ ಕೀಪರ್ ರಿಷಬ್ ಪಂತ್ ನನ್ನು ಮಾಜಿ ಆಟಗಾರರು ಭೇಟಿಯಾಗಿದ್ದಾರೆ. ರಿಷಬ್ ಮನೆಗೆ ಎಂಟ್ರಿ ಕೊಟ್ಟು ಆತನ ಆರೋಗ್ಯ ವಿಚಾರಿಸಿದ್ದಾರೆ.

ಹರ್ಭಜನ್ ಸಿಂಗ್, ಸುರೇಶ್ ರೈನಾ ಹಾಗೂ ಶ್ರೀಶಾಂತ್, ಪಂತ್ ಮನೆಗೆ ಭೇಟಿ ಕೊಟ್ಟು ಕೆಲ ಕಾಲ ಆತನೊಂದಿಗೆ ಕಳೆದಿದ್ದಾರೆ. ಆದಷ್ಟು ಬೇಗ ಗುಣಮುಖನಾಗಲಿ ಎಂದು ಶುಭ ಹಾರೈಸಿದರು. ಹಿರಿಯ ಆಟಗಾರರ ಭೇಟಿಯಿಂದ ಪಂತ್ ಗೆ ಮತ್ತಷ್ಟು ಧೈರ್ಯ ಬಂದಿದೆ. ಖುಷಿ ಖುಷಿಯಾಗಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ.

ಐಪಿಎಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿ ಟೀಂ ಮುಂದುವರೆಸಿದ್ದ ಪಂತ್, ಈಗ ವಿಶ್ರಾಂತಿ ಪಡೆಯುತ್ತಿದ್ದಾರೆ. ಕ್ರಿಕೆಟ್ ಮೈದಾನಕ್ಕೆ ಇಳಿಯಲು ಇನ್ನು ಒಂದು ವರ್ಷ ಸಮಯ ತೆಗೆದುಕೊಳ್ಳಬಹುದು. 25 ವರ್ಷದ ಆಟಗಾರ ಬದುಕಿನಲ್ಲಿ ಅಂದು ನಿಜಕ್ಕೂ ದೊಡ್ಡ ಆಘಾತ ನಡೆದು ಹೋಯಿತು. ಈಗ ಚೇತರಿಸಿಕೊಳ್ಳುತ್ತಿದ್ದು, ಎಲ್ಲರಿಗೂ ಖುಷಿಯಾಗಿದೆ.




Leave a Reply

Your email address will not be published. Required fields are marked *

error: Content is protected !!