ಐಪಿಎಲ್ ನಲ್ಲಿ ರೈನಾ ಮತ್ತೊಂದು ದಾಖಲೆ

264

ಪ್ರಜಾಸ್ತ್ರ ಕ್ರೀಡಾ ಸುದ್ದಿ

ನವದೆಹಲಿ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಫೋಟಕ ಆಟಗಾರ ಸುರೇಶ ರೈನಾ ಮತ್ತೊಂದು ದಾಖಲೆ ಮಾಡಿದ್ದಾರೆ. ಮುಂಬೈ ವಿರುದ್ಧದ ಪಂದ್ಯವಾಡುವ ಮೂಲಕ, ಐಪಿಎಲ್ ನಲ್ಲಿ 200ನೇ ಪಂದ್ಯವಾಡಿದ ಆಟಗಾರರಾದರು. ಈ ಮೂಲಕ ಈ ಸಾಧನೆ ಮಾಡಿದ 4ನೇ ಬ್ಯಾಟ್ಸಮನ್ ಆದರು.

200ನೇ ಪಂದ್ಯದಲ್ಲಿ ರೈನಾ 2 ರನ್ ಗಳಿಸುವ ಮೂಲಕ ನಿರಾಸೆ ಮೂಡಿಸಿದ್ರು. ಎಂ.ಎಸ್ ಧೋನಿ, ರೋಹಿತ ಶರ್ಮಾ, ದಿನೇಶ ಕಾರ್ತಿಕ ಬಳಿಕ ರೈನಾ 200 ಪಂದ್ಯಗಳನ್ನಾಡಿದ ಆಟಗಾರರಾಗಿದ್ದಾರೆ. 2008ರಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಆಡ್ತಿದ್ದಾರೆ. ದುಬೈನಲ್ಲಿ ನಡೆದ 2019ರ ಟೂರ್ನಿಯಲ್ಲಿ ಆಡಿರ್ಲಿಲ್ಲ.

ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ ಕೊಹ್ಲಿ, ಸನ್ ರೈಸರ್ಸ್ ಹೈದ್ರಾಬಾದ್ ವಿರುದ್ಧದ ಮುಂದಿನ ಪಂದ್ಯದಲ್ಲಿ ಆಡುವ ಮೂಲಕ 200ರ ಗಡಿ ದಾಟಲಿದ್ದಾರೆ.




Leave a Reply

Your email address will not be published. Required fields are marked *

error: Content is protected !!