‘ಎಸ್ಎಸ್ಆರ್’ಗೆ ಮರಣೋತ್ತರ ಪಾಲ್ಕೆ ಪ್ರಶಸ್ತಿ?

386

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಇತ್ತೀಚೆಗೆ ಸಾವನ್ನಪ್ಪಿದ ಬಾಲಿವುಡ್ ನಟ ಸುಶಾಂತ ಸಿಂಗ್ ರಜಪೂತ್ ಗೆ ಮರಣೋತ್ತರವಾಗಿ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಘೋಷಿಸಲಾಗಿದೆ ಎಂದು ಹೇಳಲಾಗ್ತಿದೆ. 2021ರ ಫಿಲ್ಮ್ ಫೆಸ್ಟ್ ವೆಲ್ ನಲ್ಲಿ ಇದನ್ನ ನೀಡಲಾಗುತ್ತದೆಯಂತೆ.

ಪಾಲ್ಕೆ ಪ್ರಶಸ್ತಿ ವಿಚಾರ ಆನ್ಲೈನ್ ವೊಂದರಲ್ಲಿ ಬಂದಿದೆ. ಪ್ರತಿಷ್ಠಿತ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿಯನ್ನ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2021ರಲ್ಲಿ ನೀಡಲಾಗುತ್ತೆ ಎಂದು ಹೇಳಲಾಗ್ತಿದೆ. ಇದಕ್ಕೂ ಮೊದ್ಲು  ಅಮೆರಿಕಾದಲ್ಲಿರುವ ಸಹೋದರಿ ಶ್ವೇತಾ ಸಿಂಗ್ ಕೀರ್ತಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಶೇರ್ ಮಾಡಿದ್ದು, ಕ್ಯಾಲಿಫೋರ್ನಿಯಾದಲ್ಲಿ ಸುಶಾಂತಗೆ 74ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಗೌರವ ಸಲ್ಲಿಸಲಾಗಿದೆ ಎಂದು ಹೇಳಿದ್ದಾರೆ.

ಎಸ್ಎಸ್ಆರ್ ಗೆ ಮರಣೋತ್ತರ ಪಾಲ್ಕೆ ಪ್ರಶಸ್ತಿ ಘೋಷಣೆಯಾಗಿರುವ ಸಂಬಂಧ ಅಧಿಕೃತ ಮಾಹಿತಿ ಬೇಕಿದೆ. ಸಿನಿ ರಂಗದ ಘಟಾನುಘಟಿ ನಟ, ನಟಿಯರನ್ನ ಬಿಟ್ಟು ಸುಶಾಂತಗೆ ನೀಡಿರುವುದರ ಹಿಂದಿನ ಕಾರಣವೇನು? ಆತನ ಸಾವಿಗೆ ಮರುಕದಿಂದ ನೀಡಿದ್ದಾ? ಚಿಚೋರೆ, ದಿಲ್ ಬೇಚಾರ್ ದಂತಹ ಸಿನಿಮಾದಲ್ಲಿನ ನಟನೆಗಾಗಿ ಕೊಟ್ಟಿದ್ದಾ? ಗೊತ್ತಿಲ್ಲ. ಆದ್ರೆ ಒಂದಿಷ್ಟು ಪ್ರಶ್ನೆಗಳನ್ನು ಮಾತ್ರ ಮೂಡಿಸಿದೆ.




Leave a Reply

Your email address will not be published. Required fields are marked *

error: Content is protected !!