ಸುಶಾಂತ ಸಿಂಗ್ ಸಾವು ಪ್ರಕರಣ: ಸ್ನೇಹಿತ ಸಿದ್ಧಾರ್ಥ ಬಂಧನ

253

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬಾಲಿವುಡ್ ನಟ ಸುಶಾಂತ ಸಿಂಗ್ ರಾಜಪೂತ್ ಆತ್ಮಹತ್ಯೆ ಪ್ರಕರಣದ ಬಳಿಕ ಡ್ರಗ್ಸ್ ವಿಚಾರ ಸಂಚಲನ ಮೂಡಿಸಿತು. ಇದರ ಸಂಬಂಧ ಶುಕ್ರವಾರ ಸುಶಾಂತ ಸ್ನೇಹಿತ ಸಿದ್ಧಾರ್ಥ ಪಿತಾಣಿ ಎಂಬುವನನ್ನ ಎನ್ ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

ಕಂಟೆಂಟ್ ಮ್ಯಾನೇಜರ್ ಆಗಿದ್ದ ಸಿದ್ಧಾರ್ಥ, ಸುಶಾಂತ ಸ್ನೇಹಿತನಾಗಿದ್ದ. ಕೆಲ ದಿನಗಳ ಕಾಲ ಸುಶಾಂತ ಜೊತೆ ಒಂದೇ ಫ್ಲಾಟ್ ನಲ್ಲಿ ವಾಸವಾಗಿದ್ದ. ಅಲ್ದೇ, ಸುಶಾಂತ ಆತ್ಮಹತ್ಯೆ ಮಾಡಿಕೊಳ್ಳುವ ಹಿಂದಿನ ದಿನ ರಾತ್ರಿ ಸುಮಾರು 1 ಗಂಟೆಗೆ ಇವನನ್ನ ಭೇಟಿಯಾಗಿದ್ದನಂತೆ.

ನಟ ಸುಶಾಂತ ಸಾವಿಗೂ ಡ್ರಗ್ಸ್ ಮಾಫಿಯಾಗೂ ಸಂಬಂಧ ಇರುವ ಬಗ್ಗೆ ತನಿಖೆ ನಡೆಯುತ್ತಿದೆ. ಡ್ರಗ್ಸ್ ಕೇಸಿನಲ್ಲಿ ಸಿದ್ಧಾರ್ಥ ಲಿಂಕ್ ಇರುವುದು ಖಚಿತ ಪಡಿಸಿಕೊಂಡ ಎನ್ ಸಿಬಿ ಅಧಿಕಾರಿಗಳು ಹೈದ್ರಾಬಾದ್ ನಲ್ಲಿ ಬಂಧಿಸಿದ್ದು, ಮುಂಬೈಗೆ ಕರೆದುಕೊಂಡು ಬರ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!