ದಿನದ 24 ಗಂಟೆ ಅಂಗಡಿಗಳು ಓಪನ್

265

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಇನ್ಮುಂದೆ ರಾಜ್ಯದಲ್ಲಿ ಎಲ್ಲ ಅಂಗಡಿ ಮುಂಗಟ್ಟುಗಳು ದಿನದ 24 ಗಂಟೆಯೂ ತೆರೆಯಬಹುದು. ಈ ಬಗ್ಗೆ ರಾಜ್ಯ ಸರ್ಕಾರ ಶನಿವಾರ ಹೊಸ ಆದೇಶ ಹೊರಡಿಸಿದೆ. ಈ ಆದೇಶ ಪ್ರಕಾರ ಮುಂದಿನ 3 ವರ್ಷಗಳ ಕಾಲ ವಾಣಿಜ್ಯ ಸಂಸ್ಥೆಗಳು, ಎಲ್ಲ ಅಂಗಡಿಗಳು 24X7 ಕಾರ್ಯ ನಿರ್ವಹಿಸಬಹುದು.

ಕರ್ನಾಟಕ ಅಂಗಡಿಗಳು ಹಾಗೂ ವಾಣಿಜ್ಯ ಸ್ಥಾಪನೆ ಕಾಯ್ದೆ 1961 ಹಾಗೂ ಅಧಿಸೂಚನೆಗಳನ್ನ ಮಾರ್ಪಾಡು ಮಾಡಲಾಗಿದೆ. ವಾರದಲ್ಲಿ ಒಂದು ದಿನ ಉದ್ಯೋಗಿಗೆ ರಜೆ ನೀಡಬೇಕು. ಅವರ ವಿವರ ಕುರಿತು ಬೋರ್ಡ್ ಹಾಕಿರಬೇಕು. ವೇತನ ಕಾಯ್ದೆ ಪ್ರಕಾರ ಉಳಿತಾಯ ಖಾತೆಗೆ ಅವರ ವೇತನ ಜಮಾ ಆಗಬೇಕು.

ಮಹಿಳಾ ಉದ್ಯೋಗಿಗಳಿಗೆ 8ಗಂಟೆಗೂ ಅಧಿಕ ಕೆಲಸ ನಿಡಬಾರದು. ಹೀಗೆ ಹಲವು ವಿಚಾರಗಳನ್ನ ಪ್ರಸ್ತಾಪ ಮಾಡುವುದರೊಂದಿಗೆ ರಾಜ್ಯದಲ್ಲಿ ಎಲ್ಲ ಅಂಗಡಿಗಳು ಮುಂದಿನ 3 ವರ್ಷಗಳ ಕಾಲ 24 ಗಂಟೆಯೂ ತೆರೆಯಬಹುದು ಎಂದು ಅನುಮತಿ ನೀಡಲಾಗಿದೆ.




Leave a Reply

Your email address will not be published. Required fields are marked *

error: Content is protected !!