ಬಿಗ್ ಬಿ, ಅಭಿಗೆ ಕೋವಿಡ್ 19: ಬಚ್ಚನ್ ಮನೆ ಕಂಟೈನ್ಮೆಂಟ್ ಝೋನ್

318

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಹಾಗೂ ಅವರ ಮಗ, ನಟ ಅಭಿಷೇಕ ಬಚ್ಚನ್ ಗೆ ಕರೋನಾ ಸೋಂಕು ದೃಢಪಟ್ಟಿದೆ. ಹೀಗಾಗಿ ಇವರಿಬ್ಬರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಭಾನುವಾರ ಬೃಹನ್ಮುಂಬಯಿ ಕಾರ್ಪೂರೇಷನ್ ಅಧಿಕಾರಿಗಳು, ಇವರ ಮನೆಯನ್ನ ಕಂಟೈನ್ಮೆಂಟ್ ಝೋನ್ ಮಾಡಲಾಗಿದೆ.

ಕಳೆದ ರಾತ್ರಿ ಅಮಿತಾಬ್ ಬಚ್ಚನ್ ಅವರನ್ನ ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಗ ಸೋಂಕು ದೃಢಪಟ್ಟಿದೆ. ಇವರ ಜೊತೆಗೆ ಪತ್ನಿ ಜಯಾ ಬಚ್ಚನ್, ಮಗ ಹಾಗೂ ಸೊಸೆಯನ್ನ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅದರಲ್ಲಿ ಮಗ ಅಭಿಷೇಕ ಬಚ್ಚನ್ ಗೆ ಸೋಂಕು ತಗುಲಿರುವುದು ದೃಢವಾಗಿದೆ.




Leave a Reply

Your email address will not be published. Required fields are marked *

error: Content is protected !!