ಪಿಗ್ಗಿ ಜೊತೆ ನಟಿಸಬೇಡವೆಂದು ಐಶು ಗಂಡನಿಗೆ ಹೇಳಿದ್ದರ ಗುಟ್ಟು ರಟ್ಟು

397

ಬಾಲಿವುಡ್ ಅಂಗಳವನ್ನ ಒಂದು ಕಾಲದಲ್ಲಿ ಆಳಿದ ನಟಿ ಅಂದ್ರೆ ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಬಚ್ಚನ. ಮದುವೆ, ಮಗು ಆದ್ಮೇಲೆ ಐಶು ಯಾವ ಚಿತ್ರಗಳಲ್ಲಿ ಕಾಣಿಸಿಕೊಂಡಿಲ್ಲ. ಈ ನಟಿ ಇನ್ನೋರ್ವ ಮಾಜಿ ವಿಶ್ವಸುಂದರಿ ನಟಿ ಪ್ರಿಯಾಂಕಾ ಜೊತೆ ನಟಿಸಲು ಗಂಡ ಅಭಿಷೇಕೆಗೆ ಹೇಳಿದ್ದಳಂತೆ. ಹೀಗಾಗಿ ಸ್ಕೈ ಇಸ್ ಪಿಂಕ್ ಚಿತ್ರದಲ್ಲಿ ಪಿಗ್ಗಿಗೆ ಜೋಡಿಯಾಗಿ ಅಭಿ ಕಾಣಿಸಿಕೊಳ್ಳಲಿಲ್ಲ.

ಸೊನಾಲಿ ಭೋಸ್ ನಿರ್ದೇಶನದ ಸ್ಕೈ ಇಸ್ ಪಿಂಕ್ ಚಿತ್ರದಲ್ಲಿ ಮೊದಲು ನಟಿ ಐಶ್ವರ್ಯ ರೈ ಬಚ್ಚನ ಹಾಗೂ ಅಭಿಷೇಕ ಬಚ್ಚನ್ ಜೊತೆಗೆ ನಟಿಸಬೇಕಿತ್ತು. ಮದ್ವೆಯಾದ್ಮೇಲೆ ಮೊದಲ ಬಾರಿಗೆ ಈ ಜೋಡಿ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳಬೇಕಿತ್ತು. ಆದ್ರೆ, ಬಳಿಕ ಐಶ್ವರ್ಯ ಬದಲು ಪ್ರಿಯಾಂಕಾ ಚೋಪ್ರಾ ಆ ಪಾತ್ರಕ್ಕೆ ಸೂಕ್ತವೆಂದು ಆಕೆಯನ್ನ ಆಯ್ಕೆ ಮಾಡಲಾಯ್ತು. ಹೀಗಾಗಿ ಐಶು ಈ ಚಿತ್ರದಿಂದ ಔಟ್ ಆದ್ಳು.

ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ನಟ ಅಭಿಷೇಕ ಬಚ್ಚನ್ ನಡುವೆ ಒಳ್ಳೆಯ ಸ್ನೇಹವಿದೆ. ಇದು ಪತ್ನಿ ಐಶ್ವರ್ಯಗೆ ಒಂದಿಷ್ಟು ಭಯ ಕಾಡಲು ಶುರು ಮಾಡಿದೆ. ಹೀಗಾಗಿ ನಟಿ ಪ್ರಿಯಾಂಕಾ ಜೊತೆ ನಟಿಸಬೇಡಿ ಎಂದು ಹೇಳಿದ್ದಳಂತೆ. ಹೀಗಾಗಿ ಅಭಿ ಸಹ ಸ್ಕೈ ಇಸ್ ಪಿಂಕ್ ಚಿತ್ರದಿಂದ ಔಟ್ ಆದ್ರು.

ಇದ್ರಿಂದಾಗಿ ಅಭಿಷೇಕ ಪಾತ್ರವನ್ನ ನಟ ಫರ್ಹಾನ ಅಖ್ತರ ನಟಿಸಿದ್ರು. ಇದರ ಜೊತೆಗೆ ಈ ಚಿತ್ರದಲ್ಲಿ ತಂದೆಯ ಪಾತ್ರಕ್ಕೆ ಹೆಚ್ಚು ಮಹತ್ವವಿಲ್ಲ. ಮನ್ ಮರ್ಜಿಯಾ ಚಿತ್ರದಲ್ಲಿನ ಗಟ್ಟಿ ಪಾತ್ರಗಳ ರೀತಿಯಲ್ಲಿರುವ ಚಿತ್ರಗಳಲ್ಲಿ ನಟಿಸಿಯೆಂದು ಹೇಳಿದ್ಳಂತೆ. ಒಟ್ಟಿನಲ್ಲಿ ಸ್ಕೈ ಇಸ್ ಪಿಂಕ್ ನಲ್ಲಿ ಅಭಿ ಕಾಣಿಸಿಕೊಳ್ಳದಿರಲು ಹಿಂದಿನ ಗುಟ್ಟು ರಟ್ಟಾಗಿದೆ.




Leave a Reply

Your email address will not be published. Required fields are marked *

error: Content is protected !!